ಎಪಿಎಂಸಿ ಚುನಾವಣೆ ಮತದಾನ
ಎಪಿಎಂಸಿ ಚುನಾವಣೆ: ಶೇ. 40.74 ಮತದಾನ
ಮಂಗಳೂರು, ಜ.12: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಮಂಗಳೂರು, ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿಗಳಲ್ಲಿ ಒಟ್ಟು ಶೇ.40.74 ಮತದಾನವಾಗಿದೆ. ಮಂಗಳೂರು ತಾಲೂಕಿನಲ್ಲಿ ಶೇ. 36.22 ಹಾಗೂ ಬಂಟ್ವಾಳ ತಾಲೂಕಿನಲ್ಲಿ ಶೇ.44.85ರಷ್ಟು ಮತದಾನವಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಶೇ. 41.14 ಮತದಾನವಾಗಿದೆ.
ಮಂಗಳೂರು ತಾಲೂಕಿನಲ್ಲಿ ಒಟ್ಟು 14 ಕ್ಷೇತ್ರಗಳಿಗೆ 32,968 ಮತದಾರರಿದ್ದು, ಈ ಪೈಕಿ 11,942 ಮಂದಿ ಮತ ಚಲಾಯಿಸಿದ್ದಾರೆ. ಬಂಟ್ವಾಳ ತಾಲೂಕಿನಲ್ಲಿ ಒಟ್ಟು 14 ಕ್ಷೇತ್ರಗಳಿಗೆ 50,167 ಮತದಾರರಿದ್ದು, ಈ ಪೈಕಿ 22,497 ಮಂದಿ ಮತ ಚಲಾಯಿಸಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ 54,170 ಮತದಾರರ ಪೈಕಿ 22,288 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತಗಳ ಎಣಿಕೆ ಜನವರಿ 14ರಂದು ನಡೆಯಲಿದೆ.
Next Story





