ಅಭಿಷೇಕ್ ಆತ್ಮಹತ್ಯೆಪ್ರಕರಣ ನಾಲ್ವರ ವಿರುದ್ಧ ದೂರು ದಾಖಲು

ಚಿಕ್ಕಮಗಳೂರು, ಜ.12: ಶೃಂಗೇರಿ ಪಟ್ಟಣದ ಜೆಸಿಬಿಎಂ ಕಾಲೇಜಿನ ವಿದ್ಯಾರ್ಥಿ ಅಭಿಷೇಕ್ ಆತ್ಮಹತ್ಯೆ ಪ್ರಕರಣ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದಡಿ ನಾಲ್ವರ ಮೇಲೆ ಪ್ರಕರಣವನ್ನು ದಾಖಲು ಮಾಡಲಾಗಿದೆ.
ಕಾಲೇಜು ಪ್ರಾಂಶುಪಾಲ ದೇವದಾಸ್ ನಾಯಕ್ ಹಾಗೂ ವಿದ್ಯಾರ್ಥಿ ಸಂಘಟನೆಯಾದ ಎನ್‌ಎಸ್‌ಯುಐ ಕಾರ್ಯಕರ್ತರಾದ ಅಂಜನ್, ಅಶ್ವಥ್ ಮತ್ತೋರ್ವ ವಿದ್ಯಾರ್ಥಿ ಮೇಲೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಅಭಿಷೇಕ್ ಆತ್ಮಹತ್ಯೆ ಬಳಿಕ ಮೃತನ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಹಾಗೂ ಎಬಿವಿಪಿ ಪದಾಧಿಕಾರಿಗಳು ಕೂಡ ಕೆಲವರು ಪ್ರಚೋದನೆಯಿಂದ ಈ ಆತ್ಮಹತ್ಯೆ ನಡೆದಿದೆ ಎಂದು ದೂರು ನೀಡಿದ್ದರು.
ಕೊಪ್ಪದಲ್ಲಿ ಪ್ರತಿಭಟನೆ:
ಕೊಪ್ಪತಾಲೂಕು ಕೇಂದ್ರದಲ್ಲಿ ಗುರುವಾರ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಎಬಿವಿಪಿ ಕಾರ್ಯಕರ್ತನ ಆತ್ಮಹತ್ಯೆಗೆ ಕಾಂಗ್ರೆಸ್ ಮತ್ತು ಸರಕಾರವೇ ನೇರ ಕಾರಣ. ಪ್ರಕರಣ ನಡೆಯುವುದಕ್ಕೂ ಮುನ್ನ ಕಾಂಗ್ರೆಸ್ ಮುಖಂಡರು ಪೊಲೀಸರಿಗೆ ಒತ್ತಡ ಹೇರಿ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಿರುವುದು ಅಭಿಷೇಕ್ ಆತ್ಮಹತ್ಯೆಗೆ ಮೂಲ ಕಾರಣ ಎಂದು ಪ್ರತಿಭಟನಾಕಾರರು ತಹಶೀಲ್ದಾರರ ಮೂಲಕ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಸಣ್ಣವಯಸ್ಸಿನ ಮುಗ್ಧಯುವಕ ಆತ್ಯಹತ್ಯೆ ಮಾಡಿಕೊಂಡಿರುವುದು ಅತೀವ ದುಃಖವಾಗುತ್ತಿದೆ. ಅಭಿಷೇಕ್‌ನ ಆತ್ಮಹತ್ಯೆಯ ಹಿಂದಿರುವ ಸತ್ಯತೆಯ ಬಗ್ಗೆ ಸರಕಾರ ಕೂಡಲೇ ತನಿಖೆ ನಡೆಸಬೇಕು. ಕಾಲೇಜಿನ ಆವರಣದ ಒಳಗೆ ರಾಜಕೀಯ ವ್ಯಕ್ತಿಗಳು ಪ್ರವೇಶ ಮಾಡಿ ಯುವಕರಿಗೆ ಪ್ರಚೋದನೆ ನೀಡುವ ಕಾರ್ಯವನ್ನು ತಡೆಗಟ್ಟಬೇಕು. ರಾಜಕಾರಣ ಕಾಲೇಜಿನಲ್ಲಿ ನಡೆಸುವ ಬಗ್ಗೆ ದೊಡ್ಡ ಚರ್ಚೆಯಾಗಬೇಕಿದೆ.
ಪ್ರತಿ ಪಕ್ಷ ನಾಯಕ ಈಶ್ವರಪ್ಪ





