ಜ. 15ರಂದು ಫರಂಗಿಪೇಟೆ ನಮ್ಮ ಆಯುರ್ವೇದದಲ್ಲಿ ಉಚಿತ ಮಧುಮೇಹ ತಪಾಸಣಾ ಶಿಬಿರ
ಬಂಟ್ವಾಳ, ಜ. 12: ಫರಂಗಿಪೇಟೆಯ ವಿಶ್ವಾಸ್ ಸಿಟಿ ಸೆಂಟರ್‌ನಲ್ಲಿರುವ ನಮ್ಮ ಆಯುರ್ವೇದ ಚಿಕಿತ್ಸಾಲಯ ಮತ್ತು ಔಷಧಾಲಯದಲ್ಲಿ ಜ. 15ರಂದು ಮಧುಮೇಹ ತಪಾಸಣಾ ಉಚಿತ ಶಿಬಿರ ನಡೆಯಲಿದೆ.
ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ನಡೆಯುವ ಈ ಶಿಬಿರವನ್ನು ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಕೃಷ್ಣಕುಮಾರ ಪೂಂಜ ಉದ್ಘಾಟಿಸುವರು. ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ ಉಪಸ್ಥಿತರಿರುವರು. ಈ ಸಂದರ್ಭ ತಜ್ಞ ವೈದ್ಯರಾದ ಡಾ. ಮಹೇಶ್ ಟಿ.ಎಸ್., ಡಾ. ಶ್ರೀವಿದ್ಯಾ ಎಂ., ಹಾಜರಿರುವರು ಎಂದು ನಮ್ಮ ಆಯುರ್ವೇದ ಬಳಗದ ಪ್ರಕಟಣೆ ತಿಳಿಸಿದೆ.
Next Story





