ಎಂಸಿಎ ಹಂಗಾಮಿ ಅಧ್ಯಕ್ಷರಾಗಿ ಶೇಲಾರ್ ಆಯ್ಕೆ
ಮುಂಬೈ, ಜ.12: ಎನ್‌ಸಿಪಿ ಮುಖಂಡ ಶರದ್ ಪವಾರ್ ರಾಜೀನಾಮೆಯಿಂದ ತೆರವಾಗಿದ್ದ ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ)ಯ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷ ಆಶೀಷ್ ಶೇಲಾರ್ ಗುರುವಾರ ಆಯ್ಕೆಯಾಗಿದ್ದಾರೆ.
ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲೇಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ 70 ವರ್ಷ ದಾಟಿರುವ ಪವಾರ್ ಕೋರ್ಟ್ ತೀರ್ಪು ಬರುವ ಮೊದಲೇ ಡಿ.17 ರಂದು ಅಧ್ಯಕ್ಷ ಸ್ಥಾನ ತ್ಯಜಿಸಿದ್ದರು.
‘‘ನಾವು ಇಂದು ತೆರವಾಗಿದ್ದ ಅಧ್ಯಕ್ಷ ಸ್ಥಾನವನ್ನು ತುಂಬಿದ್ದೇವೆ. ಶರದ್ ಪವಾರ್ ರಾಜೀನಾಮೆಯಿಂದ ಖಾಲಿಯಾಗಿದ್ದ ಎಂಸಿಎನ ಅಧ್ಯಕ್ಷ ಸ್ಥಾನಕ್ಕೆ ತಾತ್ಕಾಲಿಕವಾಗಿ ಶೇಲಾರ್ ಕಾರ್ಯನಿರ್ವಹಿಸಲಿದ್ದಾರೆ'' ಎಂದು ಸಂಸ್ಥೆಯ ಆಡಳಿತ ಮಂಡಳಿಯ ಸಭೆಯ ಬಳಿಕ ಎಂಸಿಎ ಜೊತೆ ಕಾರ್ಯದರ್ಶಿ ಉಮೇಶ್ ಖಾನ್ವೀಲ್ಕರ್ ತಿಳಿಸಿದ್ದಾರೆ.
Next Story





