ನಾಳೆ ಮಹಿಳಾ ಮೀನು ಮಾರುಕಟ್ಟೆ ಉದ್ಘಾಟನೆ
ಉಡುಪಿ, ಜ.12: ಉಡುಪಿ ನಗರಸಭೆ ಸಹಯೋಗದಲ್ಲಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸುಸಜ್ಜಿತ ಮಹಿಳಾ ಮೀನು ಮಾರುಕಟ್ಟೆ ಪ್ರಾಂಗಣದ ಉದ್ಘಾಟನೆ ಜ.14ರಂದು ಸಂಜೆ 5ಕ್ಕೆ ಪಿಪಿಸಿ ರಸ್ತೆಯಲ್ಲಿರುವ ನೂತನ ಮೀನು ಮಾರುಕಟ್ಟೆ ಕಟ್ಟಡದಲ್ಲಿ ನಡೆಯಲಿದೆ.
ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಮಾರುಕಟ್ಟೆಯನ್ನು ಉದ್ಘಾಟಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story





