ಮಂಗಳೂರು ವಿವಿ ಮೇಲುಗೈ
ಅಂತರ್ ವಿವಿ ಪುರುಷರ ಖೋಖೋ ಟೂರ್ನಿ

ಕೊಣಾಜೆ, ಜ.12: ಮಂಗಳಗಂಗೋತ್ರಿಯಲ್ಲಿ ನಡೆಯುತ್ತಿರುವ ಅಂತರ್ ವಿವಿ ಪುರುಷರ ಖೋಖೋ ಟೂರ್ನಿಯಲ್ಲಿ ಗುರುವಾರ ನಡೆದ ಕ್ವಾರ್ಟರ್ ೈನಲ್ ಪಂದ್ಯಾಟದಲ್ಲಿ ಮಂಗಳೂರು ವಿವಿ, ಶಿವಮೊಗ್ಗದ ಕುವೆಂಪು ವಿವಿ, ಮೈಸೂರು ವಿವಿ, ಕ್ಯಾಲಿಕಟ್ ವಿವಿಯು ಗೆಲುವು ಸಾಸುವುದರೊಂದಿಗೆ ಸೆಮಿೈನಲ್ ಹಂತಕ್ಕೆ ತಲುಪಿವೆ.
ಕ್ವಾರ್ಟರ್ ೈನಲ್‌ನಲ್ಲಿ ಮಂಗಳೂರು ವಿವಿಯು ಆದಿಕವಿ ನನ್ನಯ್ಯ ವಿವಿಯನ್ನು 16-8 ಅಂಕಗಳಿಂದ ಗೆಲುವು ಸಾಸಿ ಸೆಮಿೈನಲ್ ತಲುಪಿದರೆ, ಶಿವಮೊಗ್ಗದ ಕುವೆಂಪು ವಿವಿಯು ಪಾಂಡಿಚೇರಿ ವಿವಿಯನ್ನು 16-2 ಅಂಕಗಳಿಂದ ಸೋಲಿಸಿ ಸೆಮಿೈನಲ್ ಹಂತಕ್ಕೆ ತಲುಪಿದರೆ, ಮೈಸೂರು ವಿವಿಯು ತಮಿಳುನಾಡಿನ ಭಾರತೀಯರ್ ವಿವಿಯನ್ನು 12-7 ಅಂಕಗಳಿಂದ ಮಣಿಸಿತು. ಇನ್ನೊಂದು ಪಂದ್ಯದಲ್ಲಿ ಕ್ಯಾಲಿಕಟ್ ವಿವಿಯು ತಮಿಳುನಾಡಿನ ಅಣ್ಣಾಮಲೈ ವಿವಿಯನ್ನು 20-9 ಅಂಕಗಳಿಂದ ಗೆಲುವನ್ನು ತನ್ನದಾಗಿಸಿಕೊಂಡು ಸೆಮಿೈನಲ್ ಪ್ರವೇಶಿಸಿತು. ಬಳಿಕ ನಡೆದ ಸೆಮಿೈನಲ್ ಲೀಗ್ ಪಂದ್ಯದಲ್ಲಿ ಮಂಗಳೂರು ವಿವಿಯು ಮೈಸೂರು ವಿವಿಯನ್ನು 12-10 ಅಂಕಗಳಿಂದ ಪರಾಭವಗೊಳಿಸಿದರೆ, ಕುವೆಂಪು ವಿವಿ ಕ್ಯಾಲಿಕಟ್ ವಿವಿಯ ನಡುವೆ ನಡೆದ ಪಂದ್ಯಾಟದಲ್ಲಿ ಕುವೆಂಪು ವಿವಿಯು ಕ್ಯಾಲಿಕಟ್ ವಿವಿಯನ್ನು 18-9 ಅಂಕಗಳಿಂದ ಸೋಲಿಸಿತು.





