Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಅಜಿನಾಮೋಟೊ ಎಂಬ ಸೈಲೆಂಟ್ ಕಿಲ್ಲರ್

ಅಜಿನಾಮೋಟೊ ಎಂಬ ಸೈಲೆಂಟ್ ಕಿಲ್ಲರ್

ಡಾ.ಮುರಳೀಮೋಹನ್ಡಾ.ಮುರಳೀಮೋಹನ್13 Jan 2017 12:26 AM IST
share
ಅಜಿನಾಮೋಟೊ ಎಂಬ ಸೈಲೆಂಟ್ ಕಿಲ್ಲರ್

ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎಂಬುದು ನಿಮ್ಮ ಹಿರಿಯರು ಯಾವತ್ತೂ ಹೇಳುವ ಹಿತನುಡಿ. ಆದರೆ ಇದನ್ನು ಅನುಕರಣೆ ಮಾಡುವವರ ಸಂಖ್ಯೆ ಮಾತ್ರ ಬಹಳ ಕಡಿಮೆ ಎನ್ನುವುದೇ ಈ ಶತಮಾನದ ಬಹುದೊಡ್ಡ ದುರಂತ ಎಂದರೂ ತಪ್ಪಲ್ಲ. ನಮ್ಮ ದೇಹಕ್ಕೆ ಬರುವ ಹೆಚ್ಚಿನ ರೋಗಗಳು ತಡೆಗಟ್ಟಬಹುದಾದ ರೋಗಗಳೇ. ನಾವು ಏನ್ನನ್ನು ತಿನ್ನುತ್ತೇವೆ ಎನ್ನುವ ಪರಿಜ್ಞಾನ ಇಲ್ಲದೆ, ನಾಲಗೆಯ ದಾಸನಾಗಿ ಸಿಕ್ಕಿ ಸಿಕ್ಕಿದ್ದನ್ನೆಲ್ಲಾ ತಿನ್ನುವ ಕಾರಣದಿಂದಲೇ ದಿನಕ್ಕೊಂದರಂತೆ ಹೊಸ ಹೊಸ ರೋಗಗಳು ಉದ್ಭವಿಸುತ್ತದೆ. ಬದುಕುವುದಕ್ಕಾಗಿ ತಿನ್ನಿ, ತಿನ್ನುವುದಕ್ಕಾಗಿ ಬದುಕಬೇಡಿ ಎಂದು ಹಿರಿಯರು ಸಾರಿ ಹೇಳಿದರೂ, ಕೇವಲ ನಾಲಿಗೆಯ ಚಾಪಲ್ಯಕ್ಕೆ ಬಲಿಯಾಗಿ ಏನು ತಿನ್ನಬಾರದೊ ಅದನ್ನೇ ತಿಂದು ರೋಗರುಜಿನಗಳಿಗೆ ದಾಸರಾಗುತ್ತೀರುವುದೇ ಬಹುದೊಡ್ಡ ವಿಪರ್ಯಾಸ. ಇತ್ತೀಚಿನ ದಿನಗಳಲ್ಲಿ ದಿಢೀರ್ ತಿಂಡಿಗಳು, ಸಿದ್ಧ ಆಹಾರಗಳು ಮತ್ತು ಚೈನೀಸ್ ತಿಂಡಿಗಳ ಹಾವಳಿ ತಾರಕಕ್ಕೇರಿದೆ. ಅತೀ ಹೆಚ್ಚು ಕೊಬ್ಬು, ಕ್ಯಾಲರಿ ಮತ್ತು ಲವಣಗಳಿಂದ ಕೂಡಿದ, ಕನಿಷ್ಠ ಪೋಷಕಾಂಶ ಮತ್ತು ಪೌಷ್ಟಿಕಾಂಶ ಹೊಂದಿರುವ ಈ ಆಹಾರವನ್ನು ಜಂಕ್ ಫುಡ್ ಎಂದು ಕರೆಯಲಾಗುತ್ತದೆ. ಈ ಎಲ್ಲಾ ಆಹಾರಗಳನ್ನು ರುಚಿಕರ ವಾಗಿರಿಸಲು ಬಳಸುವ ರಾಸಾಯನಿಕವೇ ನಮ್ಮ ಈಗಿನ ಮಕ್ಕಳ ಮತ್ತು ಯುವ ಜನರ ಆರೋಗ್ಯಕ್ಕೆ ಮಾರಕವಾದ ಅಜಿನಾಮೊಟೊ ಎನ್ನುವ ಸೈಲೆಂಟ್ ಕಿಲ್ಲರ್.

ಏನಿದು ಅಜಿನಾಮೊಟೊ?
ದಿನವೊಂದರಲ್ಲಿ ಬೀದಿಗೆರಡರಂತೆ ನಾಯಿ ಕೊಡೆಗಳ ರೀತಿಯಲ್ಲಿ ಹುಟ್ಟಿಕೊಳ್ಳುವ ಪಾಸ್ಟ್‌ಪುಡ್ ಅಥವಾ ಚೈನೀಸ್ ಫುಡ್ ಜಾಯಿಂಟ್‌ಗಳಲ್ಲಿ ರುಚಿಗಾಗಿ ಬಳಸುವ ಮೋನೋ ಸೋಡಿಯಂ ಗ್ಲುಟಾಮೇಟ್ ಎಂಬ ರಾಸಾಯನಿಕವೇ ನಮ್ಮ ಕತೆಯ ಖಳನಾಯಕ. ಇದೊಂದು ಆಹಾರವನ್ನು ರುಚಿಯಾಗಿರಿಸುವ ಪದಾರ್ಥ. ಚೈನೀಸ್ ಫಾಸ್ಟ್‌ಫುಡ್‌ಗಂತೂ ಇದನ್ನು ಬೆರೆಸಿಲ್ಲದಿದ್ದರೆ, ನಮ್ಮ ನಾಲಗೆಗೆ ಆ ಫ್ರೈಡ್ ರೈಸ್‌ನ ರುಚಿ, ನೂಡಲ್ಸ್‌ನ ರುಚಿ ಖಂಡಿತ ಬರುವುದೇ ಇಲ್ಲ. MSG ಎಂದು ಕರೆಸಿಕೊಳ್ಳುವ ಈ ಸೈಲೆಂಟ್ ಕಿಲ್ಲರ್, ಎಲ್ಲ ಸಿದ್ಧ ಮತ್ತು ದಿಢೀರ್ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಮಾಲ್‌ಗಳಲ್ಲಿ, ಬೇಕರಿಗಳಲ್ಲಿ, ಫಾಸ್ಟ್‌ಫುಡ್‌ಗಳಲ್ಲಿ ದೊರೆಯುವ, ಮುಚ್ಚಿದ ತಗಡಿನ ಡಬ್ಬಗಳಲ್ಲಿ ಮಾರಾಟವಾಗುವ ಎಲ್ಲಾ ಪದಾರ್ಥಗಳಲ್ಲಿ ಅಧಿಕವಾಗಿ MSG ಬಳಸುತ್ತಾರೆ. 1908ರಲ್ಲಿ ಜಪಾನಿ ಸಂಶೋಧಕ ಕಿಕುನೆ ಇಕೆಡಾ ಎಂಬಾತ ಈ ರಾಸಾಯನಿಕವನ್ನು ಕಂಡು ಹಿಡಿದ. ಆ್ಯಂಕ್ಸೆಂಟ್ ಎಂದು ಕರೆಯಲಾದ ಕಡಲೊಳಗಿನ ಸಸ್ಯ ಬಳ್ಳಿಗಳ ರಸದಿಂದ ತಯಾರಿಸಿದ ಈ ರಾಸಾಯನಿಕ, ನೈಸರ್ಗಿಕ ರುಚಿ ತರಿಸುವ ಪದಾರ್ಥವಾಗಿರುತ್ತದೆ. ಇದನ್ನು ಆವಿಷ್ಕರಿಸಿ ಹೊಸದಾದ ರುಚಿ ತರುವ ಪದಾರ್ಥವನ್ನು ಸೃಷ್ಟಿಸಿ ಅದಕ್ಕೆ ಅಜಿನಾಮೋಟೊ ಎಂದು ನಾಮಕರಣ ಮಾಡಿದ. ಇದರಲ್ಲಿ ಶೇ. 78 ಗ್ಲುಟಾಮಿಕ್ ಆ್ಯಸಿಡ್ ಮುಕ್ತ ರೂಪದಲ್ಲಿ ಇದೆ. ಶೇ. 21 ಸೋಡಿಯಂ ಮತ್ತು ಶೇ. 1 ಕಲ್ಮಶಗಳಿದೆ. ಇವುಗಳ ಒಟ್ಟು ರುಚಿಗೆ ಉಮಾಮಿ ಎನ್ನುತ್ತಾರೆ. ಒಟ್ಟಿನಲ್ಲಿ MSG ಎಂಬ ಗುಪ್ತ ನಾಮದಿಂದ ಕರೆಯಲ್ಪಡುವ ಈ ರಾಸಾಯನಿಕ, ರುಚಿ ಹೆಚ್ಚಿಸುವುದರ ಜೊತೆಗೆ ನಮ್ಮ ದೇಹದ ಒಂದೊಂದೇ ಅಂಗಗಳನ್ನು ನುಂಗಿ ನೀರು ಕುಡಿದು ಆಪೋಷನ ತೆಗೆದುಕೊಳ್ಳುತ್ತದೆ. ಹೆಸರೇ ಸೂಚಿಸಿದಂತೆ MSG  ಒಂದು ಎಕ್ಸೆಟೋ ಟಾಕ್ಸಿನ್. ಖ್ಯಾತ ನರತಜ್ಞ ಡಾ॥ ರಸೆಲ್ಲ ಬ್ಲೆಲಾಕ್ ಈ MSG  ಮೊದಲಾಗಿ ನರಮಂಡಲವನ್ನೇ ದಾಳಿ ಮಾಡುತ್ತದೆ. MSG ಸೇವಿಸಿದ ಬಳಿಕ ಕೊಬ್ಬು ಶೇಖರಣೆಗೊಂಡು ದಪ್ಪಗಾಗುತ್ತಾರೆ. ಆ ಬಳಿಕ ಕಣ್ಣು ನೋವು, ತಲೆನೋವು, ಸುಸ್ತು, ಆಯಾಸ, ನಿರಾಶಕ್ತಿ, ಊಟ ಸೇರದಿರುವುದು, ಅಜೀರ್ಣ, ಖಿನ್ನತೆಯಿಂದ ಬಳಲುತ್ತಾನೆ. ಗರ್ಭಿಣಿಯರಂತೂ ಈ ತೆರವಾದ ಅಜಿನಾಮೋಟೊ ಪದಾರ್ಥದಿಂದ ಮಾರು ದೂರವಿದ್ದರೆ ಆಕೆಗೂ ಮತ್ತು ಆಕೆಗೆ ಹುಟ್ಟುವ ಮಗುವಿಗೂ ಒಳಿತಾಗಬಹುದು. ಹೆಸರು ಸೂಚಿಸಿದಂತೆ ಖಎಯಲ್ಲಿ ಇರುವ ಸೋಡಿಯಂ ಅಥವಾ ಉಪ್ಪು, ಅಧಿಕ ಪ್ರಮಾಣದಲ್ಲಿ ಇರುತ್ತದೆ. ಅಧಿಕ MSG  ಬಳಸುವುದರಿಂದ ಮೆದುಳು ಶಕ್ತಿಹೀನವಾಗುತ್ತದೆ. ಸದಾ  ಬಳಕೆಯಿಂದ ದೇಹದೊಳಗಿನ ಸಹಜ ನೀರಿನ ಅಂಶ ಕಡಿಮೆಯಾಗಿ ಸದಾ ತಲೆನೋವು, ಅತಿಯಾಗಿ ಬೆವರುವಿಕೆ, ತಲೆ ಸುತ್ತುವಿಕೆಯಿಂದ ಬಳಲಿ ಬೆಂಡಾಗುತ್ತಾನೆ. ಮುಖ ಊದುವುದು, ಕಣ್ಣು ಸೆಳೆತ, ಚರ್ಮ ಬಿಗಿಯಾ ಗುವುದು, ಅತಿಯಾದ ಹೊಟ್ಟೆ ಹುರಿ, ಮೂತ್ರಬಾಧೆ, ಕಿಬ್ಬೊಟ್ಟೆನೋವು, ವಾಂತಿ ಭೇದಿ, ವಾಕರಿಕೆ, ಹಸಿವಿಲ್ಲದಿರಿವುದು, ಮೂಳೆ ಮತ್ತು ಸ್ನಾಯುಗಳಲ್ಲಿ ಕಾಣಿಸಿಕೊಳ್ಳುವ ನೋವು ಕ್ಯಾಲ್ಸಿಯಂ ಕೊರತೆ, ರಕ್ತಹೀನತೆ, ರಕ್ತದೊತ್ತಡ, ಎದೆ ಬಡಿತ ಜಾಸ್ತಿಯಾಗುವುದು ಹೀಗೆ ಒಂದೊಂದಾಗಿ ಎಲ್ಲಾ ಅಂಗಾಂಗಳನ್ನು ನುಂಗಿ ನೀರು ಕುಡಿಯುತ್ತದೆ. ಕೊನೆ ಮಾತು

ನಾವು ತಿನ್ನುವ ಆಹಾರ ಎನ್ನುವುದು ನಮ್ಮ ದೇಹದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿರಬೇಕೇ ಹೊರತು ಮಾರಕವಾಗ ಬಾರದು. ಕ್ಯಾಲ್ಸಿಯಂ, ಪ್ರೊಟೀನ್ ಶರ್ಕರಪಿಷ್ಠ, ಲವಣಾಂಶ, ಕೊಬ್ಬು ಹೇಗೆ ಎಲ್ಲವನ್ನು ಹಿತಮಿತವಾಗಿ ಹೊಂದಿರುವ ಸಮತೋಲನವಿರುವ ಆಹಾರವನ್ನು ನಾವು ಸೇವಿಸಬೇಕು. ಇದನ್ನು ಬಿಟ್ಟು ಬರೀ ರುಚಿಗೆ ಮಾತ್ರ ಆದ್ಯತೆ ನೀಡುವ, ಅತಿಯಾದ ಕೊಬ್ಬು ಕ್ಯಾಲರಿಯಿರುವ ಸಿದ್ಧ ಆಹಾರವನ್ನು ಸೇವಿಸುವುದು ನಮ್ಮ ದೇಹದ ಆರೋಗ್ಯಕ್ಕೆ ಖಂಡಿತವಾಗಿಯೂ ಒಳ್ಳೆಯದಲ್ಲ. ಯಥೇಚ್ಛವಾದ ನೀರಿನ ಬಳಕೆಯೊಂದಿಗೆ ಹಸಿ ತರಕಾರಿ, ತಾಜಾಹಣ್ಣು ಹಂಪಲುಗಳು, ನೈಸರ್ಗಿಕ ಪೇಯಗಳು ಇವೆಲ್ಲವನ್ನು ಮಾತ್ರ ನಾವು ಬಳಸಬೇಕು. ಇಲ್ಲವಾದಲ್ಲಿ ಆಹಾರವನ್ನು ಔಷಧಿಯಂತೆ ಮತ್ತು ಔಷಧಿಯನ್ನು ಆಹಾರದಂತೆ ತಿನ್ನಬೇಕಾದ ದಿನವೂ ಬರಬಹುದು.

share
ಡಾ.ಮುರಳೀಮೋಹನ್
ಡಾ.ಮುರಳೀಮೋಹನ್
Next Story
X