ಬೆಂಕಿಹಚ್ಚಿ ತಲೆಕೂದಲು ಕತ್ತರಿಸುವ ನಿಪುಣ !
ವೀಡಿಯೊ ನೋಡಿ
.jpg)
ಕಲಬುರಗಿ,ಜ.13: ಪ್ರತಿಯೊಬ್ಬರಿಗೂ ಅವರವರ ಕೆಲಸದಲ್ಲಿ ಅವರವರದೆ ಶೈಲಿ ಇರುತ್ತದೆ. ಕೆಲಸವನ್ನುಆಕರ್ಷಕಗೊಳಿಸಲು ಹಲವರು ಹಲವು ರೀತಿಯ ತಂತ್ರಗಳನ್ನು ಪ್ರಯೋಗಿಸುತ್ತಾರೆ. ಇಲ್ಲೊಬ್ಬರು ಬಾರ್ಬರ್ ತಲೆಕೂದಲಿಗೆ ಬೆಂಕಿ ಕೊಟ್ಟು ಕತ್ತರಿಸುವ ವಿಧಾನವನ್ನು ಅನುಸರಿಸುತ್ತಿದ್ದಾರೆ.
ಕೂದಲಿಗೆ ಏನೋದ್ರಾವಕ ಹುಡಿಯನ್ನು ಹಚ್ಚಿ ನಂತರ ಲೈಟರ್ ಮೂಲಕ ಬೆಂಕಿ ಉರಿಸಿ ಕೂದಲು ಉರಿಯ ತೊಡಗುತ್ತಿದ್ದಂತೆ ಬಾಚಣಿಗೆಯಲ್ಲಿ ಕೂದಲು ಬಾಚಿ ಸರಿಮಾಡುತ್ತಾರೆ. ಬೆಂಕಿ ಆರಿಬಿಡುವುದರೊಳಗೆ ಕೂದಲು ಕತ್ತರಿಸಿ ಸರಿಮಾಡಿ ಬಿಡುತ್ತಾರೆ.
ಇಂತಹ ಬೆಂಕಿ ಕೊಟ್ಟು ಕೂದಲು ಕತ್ತರಿಸುವುದು ಅವರು ಒಂದೆರಡು ಬಾರಿ ಮಾಡುತ್ತಾರೆ. ಗ್ರಾಹಕರು ಬಯಸುವ ರೀತಿಯಲ್ಲಿ ಕೂದಲು ಕತ್ತರಿಸುವವರೆಗೆ ಅವರು ಬೆಂಕಿ ಕೊಡುತ್ತಿರುತ್ತಾರೆ. ಇಂತಹ ಪ್ರಯೋಗ ಜಾರಿಗೆ ತಂದವರು ಭಾರತದಲ್ಲಿ ಇನ್ನೂ ಅನೇಕರಿದ್ದಾರೆ. ಕಲಬುರಗಿ ಶಾಹಬಾದ್ ಗ್ರಾಮದ ಬಾರ್ಬರ್ ದಶರಥ್ ಕ್ಯಾಂಡಲ್ ಬಳಸಿ ಗ್ರಾಹಕರ ಕೂದಲನ್ನು ಉರಿಸಿ ನಂತರ ಕತ್ತರಿಸಿ ಸರಿಪಡಿಸುವ ವಿಧಾನವನ್ನು ಅನುಸರಿಸುತ್ತಿದ್ದಾರೆ.
ಕಳೆದ ಆರೇಳು ವರ್ಷಗಳಿಂದ ದಶರಥ್ ಈ ರೀತಿಯಲ್ಲಿ ಕೂದಲು ಕತ್ತರಿಸುತ್ತಾ ಬಂದಿದ್ದಾರೆ. ಶಹಬಾದ್ ಗ್ರಾಮದ ರಾಜ್‌ಮೆನ್ಸ್ ಪಾರ್ಲರ್‌ನ್ನು ಹುಡುಕಿ ಜನರು ಬರುತ್ತಿರುವುದೇ ಅವರ ಈ ವಿಶೇಷ ಶೈಲಿಯ ಕೂದಲು ಕತ್ತರಿಸುವಿಕೆಗೆ ಮನಸೋತು. ಕೂದಲು ಕತ್ತರಿಸುವ ವಿಧಾನವನ್ನು ವೀಡಿಯೊದಲ್ಲಿ ಕಾಣಬಹುದು.







