ವಿದ್ಯಾರ್ಥಿಯನ್ನು ಹಾಸ್ಟೆಲ್ ಕೋಣೆಯಲ್ಲಿ ಹಾಕಿ ಮಾರಕ ಹಲ್ಲೆ ನಡೆಸಿದ ಅಧ್ಯಾಪಕರು !

ಕ್ಯಾಲಿಕಟ್,ಜ.13: ತಮಿಳ್ನಾಡಿನ ಖಾಸಗಿ ಪಾಲಿಟೆಕ್ನಿಕ್ ಕಾಲೇಜಿನ ಕೇರಳದ ವಿದ್ಯಾರ್ಥಿಗಳನ್ನು ಹತ್ತುಅಧ್ಯಾಪಕರು ಸೇರಿ ಹಾಸ್ಟೆಲ್ ಕೋಣೆಯೊಳಗೆ ದಬ್ಬಿ ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಹಾಸ್ಟೆಲ್ ವಾರ್ಡನ್ ಒಬ್ಬ ಕೇರಳದ ವಿದ್ಯಾರ್ಥಿಗೆ ಹೊಡೆಯುತ್ತಿರುವುದನ್ನು ತಡೆಯಲು ಯತ್ನಿಸಿದ ಎಂಟು ಮಂದಿ ಕೇರಳದ ವಿದ್ಯಾರ್ಥಿಗಳಿಗೆ ನಾಮಕ್ಕಲ್ ಎಕ್ಸೆಲ್ ಪಾಲಿಟೆಕ್ನಿಕ್ ಕಾಲೇಜಿನ ಅಧ್ಯಾಪಕರು ಹಲ್ಲೆ ಎಸಗಿದ್ದಾರೆಂದು ದೂರು ನೀಡಲಾಗಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಗಳಲ್ಲಿ ಕಲ್ಲಿಕೋಟೆಯ ಶಿಂಟೊ(21) ಕಲ್ಲಿಕೋಟೆ ಬೀಚ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ನಗರ ಕಮೀಶನರ್‌ಗೆ ದೂರು ನೀಡಲಾದ ಹಿನ್ನೆಲೆಯಲ್ಲಿ ಪೊಲೀಸರು ಕೇಸು ದಾಖಲಿಸಿದ್ದರೂ ತನಿಖೆ ಪ್ರಾರಂಭಿಸಿಲ್ಲ ಎಂದು ವರದಿಯಾಗಿದೆ.
ಶಿಂಟೊ ಅಲ್ಲದೆ ಪಾಲಕ್ಕಾಡ್‌ನ ಮುಹಮ್ಮದ್ ಶಫೀಕ್, ಇಡುಕ್ಕಿಯ ಅಮಲ್, ಕಲ್ಲಿಕೋಟೆಯ ಬೆಂಜಮಿನ್, ಆಶಿಕ್, ಅರ್ಜುನ್ ಮುಂತಾದವರು ಅಧ್ಯಾಪಕರಿಂದ ಕ್ರೂರ ಹಲ್ಲೆಗೀಡಾಗಿದ್ದು, ಶಿಂಟೊ ತಲೆಯ ಹಿಂಬಾಗಕ್ಕೆ ಗಾಯವಾಗಿದೆ.ಗಾಯಾಳು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸೇರಿಸಲಿಕ್ಕೂ ಅಧ್ಯಾಪಕರು ಮುಂದಾಗಿಲ್ಲ. ನಂತರ ಕಾಲೇಜು ಅಧಿಕಾರಿಗಳ ಕಣ್ಣುತಪ್ಪಿಸಿ ಆವರಣ ಗೋಡೆ ಹಾರಿ ಶಿಂಟೊ ಮತ್ತು ಗೆಳೆಯರು ಊರಿಗೆ ತಲುಪಿದ್ದಾರೆ.
ಕಾಲೇಜಿನಲ್ಲಿ ನಡೆಯುತ್ತಿರುವ ಎಕ್ಸ್‌ಪೊಗೆ ಹೋಗಲು ತಡವಾದ ವಿದ್ಯಾರ್ಥಿಯನ್ನು ಹಾಸ್ಟೆಲ್ ವಾರ್ಡನ್ ಶಿವರಾಮನ್ ಹೊಡೆಯುತ್ತಿರುವುದನ್ನು ಕಂಡು ಇತರ ವಿದ್ಯಾರ್ಥಿಗಳು ಶಿಂಟೊಗೆ ತಿಳಿಸಿದ್ದರು. ಅದನ್ನು ತಡೆಯಲು ಶಿಂಟೊ ಮತ್ತು ಇತರ ವಿದ್ಯಾರ್ಥಿಗಳು ಮುಂದೆ ಬಂದರು. ಘರ್ಷಣೆಯಲ್ಲಿ ಹಾಸ್ಟೆಲ್ ವಾರ್ಡನ್ ನೆಲಕ್ಕೆ ಬಿದ್ದಿದ್ದರು. ಹಾಸ್ಟೆಲ್ ಸೂಪರ್‌ವೈಸರ್ ವಿದ್ಯಾರ್ಥಿಗಳು ಕಾಲೇಜು ಹೋಗುವಂತೆ ಹೇಳಿದರು. ನಂತರ ವಿದ್ಯಾರ್ಥಿಗಳು ಹಾಸ್ಟೆಲ್‌ನಿಂದ ಹೊರಟು ಹೋದಮೇಲೆ ಹಾಸ್ಟೆಲ್‌ನ ಬೇರೆ ವಿದ್ಯಾರ್ಥಿಗಳ ಕೈಯಲ್ಲಿ ಶಿಂಟೊ ಮತ್ತು ಇತರ ಕೇರಳ ವಿದ್ಯಾರ್ಥಿಗಳು ವಾರ್ಡನ್‌ಗೆ ಹಲ್ಲೆ ನಡೆಸಿದರೆಂದು ಬರೆಯಿಸಿ ತೆಗೆದುಕೊಂಡಿದ್ದಾರೆ.
ನಂತರ ಶಿಂಟೊ ಮತ್ತು ಗೆಳೆಯರನ್ನು ಹಾಸ್ಟೆಲ್‌ನ ಖಾಲಿಕೋಣೆಗೆ ಕರೆದುಕೊಂಡು ಹೋಗಿ ಹತ್ತು ಅಧ್ಯಾಪಕರು ಸೇರಿ ಯದ್ವಾತದ್ವಾ ಹೊಡೆದಿದ್ದಾರೆ. ಮೊಬೈಲ್ ಫೋನ್ ಕಿತ್ತುಕೊಂಡಿದ್ದಾರೆ ಎಂದು ಶಿಂಟೊ ಹೇಳಿದ್ದಾನೆ. ನಂತರ ಕೆಲವು ಅಧ್ಯಾಪಕರು ಹೇಳಿದ್ದರಿಂದ ಸಂಜೆ ಮೊಬೈಲ್ ಫೋನ್‌ನ್ನು ವಿದ್ಯಾರ್ಥಿಗಳಿಗೆ ಮರಳಿಸಲಾಯಿತು. ಅಧ್ಯಾಪಕರು ವಿದ್ಯಾರ್ಥಿಗಳ ತಲೆಗೆ ಬೆನ್ನಿಗೆ ಬೂಟುನಿಂದ ಒದ್ದಿದ್ದಾರೆ. ಬೆಲ್ಟ್‌ನಿಂದ ಬಾರಿಸಿದ್ದಾರೆ. ಮನೆಯವರಿಗೆ ಫೋನ್ ಮಾಡಲು ಕೂಡ ಬಿಡಲಿಲ್ಲ ಎಂದು ಶಿಂಟೊ ಹೇಳಿದ್ದಾನೆಂದು ವರದಿ ತಿಳಿಸಿದೆ.







