3ಮಹಡಿಯ ಮನೆಯಲ್ಲಿ ಬೆಂಕಿ: 6 ಮಕ್ಕಳು ಜೀವಂತ ದಹನ

ಬಾಲ್ಟಿಮೋರ್(ಅಮೆರಿಕ), ಜ.13: ಅಮೆರಿಕದ ಬಾಲ್ಟಿಮೋರ್‌ನಲ್ಲಿ ಮೂರು ಮಹಡಿಮನೆಗೆ ಬೆಂಕಿ ಬಿದ್ದು, ಆರು ಮಕ್ಕಳು ಮೃತರಾದ ಹೃದಯವಿದ್ರಾವಕ ಘಟನೆ ನಡೆದಿದೆ. ಮೂವರು ಮಕ್ಕಳು ಹಾಗೂ ತಾಯಿಯನ್ನು ಪಾರು ಮಾಡಲಾಗಿದೆ.
ಅಗ್ನಿಶಾಮಕ ದಳದ ವಕ್ತಾರ ರೋಮನ್ ಕ್ಲಾರ್ಕ್ ಬೆಂಕಿ ನಂದಿಸಲು ಅಗ್ನಿಶಾಮಕ ದಳ ತಲುಪುವ ಮೊದಲೇ ಮನೆ ಬೆಂಕಿಗೆ ಆಹುತಿಯಾಗಿತ್ತು ಎಂದು ತಿಳಿಸಿದ್ದಾರೆ. ಗುರುವಾರ ರಾತ್ರಿ 12:30ಕ್ಕೆ ಬೆಂಕಿ ಅನಾಹುತ ನಡೆದಿತ್ತು. ಒಂಬತ್ತು ತಿಂಗಳಿನಿಂದ ಹನ್ನೊಂದುವರ್ಷದವರೆಗಿನ ಮಕ್ಕಳು ಬೆಂಕಿಯಲ್ಲಿ ದಹನವಾಗಿದ್ದಾರೆಂದು ಅವರು ಹೇಳಿದರು. ಕಟ್ಟಡದ ಮೂರು ಮಹಡಿಯಿಂದಲೂ ತೀವ್ರ ಬೆಂಕಿ ಉಗುಳುತ್ತಿದ್ದುದರಿಂದ ಸುರಕ್ಷಾ ಕಾರ್ಯ ಕಷ್ಟವಾಗಿದೆ. ಇಬ್ಬರು ಮಕ್ಕಳು ಮತ್ತು ಮಹಿಳೆಯೊಬ್ಬರನ್ನು ಪಾರು ಮಾಡಲು ಸಾಧ್ಯವಾದರೂ ಸುಟ್ಟಗಾಯಗಳಾಗಿರುವ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.






Next Story







