ಟ್ರಾಫಿಕ್ ಪೊಲೀಸ್ ವಾರ್ಡನ್ ರಹ್ಮಾನ್ ಪಟೇಲ್ ಗೆ ಸನ್ಮಾನ

ಬಂಟ್ವಾಳ, ಜ.13 : ಬಿ.ಸಿ.ರೋಡ್ ಪರ್ಲ್ಯದಲ್ಲಿ ಇತ್ತೀಚೆಗೆ ನಡೆದ ಕೆಪಿಎಲ್ ಕ್ರಿಕೆಟ್ ಕ್ರೀಡಾಕೂಟದಲ್ಲಿ ಕೈಕಂಬದಲ್ಲಿ ಉಚಿತ ಟ್ರಾಫಿಕ್ ಸೇವೆ ನೀಡುವ ಟ್ರಾಫಿಕ್ ಪೊಲೀಸ್ ವಾರ್ಡನ್ ರಹ್ಮಾನ್ ಪಟೇಲ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಯುವ ಕಾಂಗ್ರೆಸ್ ದ.ಕ. ಜಿಲ್ಲಾ ಉಪಾಧ್ಯಕ್ಷ ಲುಕ್ಮಾನ್ ತಲಪಾಡಿ ಮೊದಲಾದವರು ಉಪಸ್ಥಿತರಿದ್ದರು.
Next Story





