ಉತ್ತರಪ್ರದೇಶ: ದೇಶದ ಅತಿ ದೊಡ್ಡ ರಾಜ್ಯದಲ್ಲಿ ಒಟ್ಟು ಎಷ್ಟು ಮತದಾರರು ?
ಇದರಲ್ಲಿ ಎಷ್ಟು ಪುರುಷರು ? ಮಹಿಳೆಯರೆಷ್ಟು ?

ಲಕ್ನೊ, ಜ.13: ಚುನಾವಣಾ ಆಯೋಗವು ಉತ್ತರ ಪ್ರದೇಶದ ಪರಿಷ್ಕೃತ ಮತ್ತು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು , ಇದರಂತೆ ಆ ರಾಜ್ಯದಲ್ಲಿ ಒಟ್ಟು 14 .12 ಕೋಟಿ ಮತದಾರರಿದ್ದಾರೆ.
ಇದರಲ್ಲಿ 7.68 ಕೋಟಿ ಪುರುಷರು, 6.44 ಕೋಟಿ ಮಹಿಳೆಯರು, 7,272 ತೃತೀಯ ಲಿಂಗಿಗಳು. ಮತದಾರರ ಸಂಖ್ಯೆ ಕಳೆದ ಬಾರಿಗಿಂತ 27 ಲಕ್ಷ ಹೆಚ್ಚಾಗಿದೆ. ಮತದಾರರ ಪಟ್ಟಿಯಿಂದ 32.36 ಲಕ್ಷ ಮಂದಿಯ ಹೆಸರನ್ನು ರದ್ದುಪಡಿಸಲಾಗಿದೆ. ಇದರಲ್ಲಿ 14.99 ಲಕ್ಷ ಮಂದಿ ಬೇರೆ ರಾಜ್ಯಕ್ಕೆ ತಮ್ಮ ವಾಸಸ್ಥಾನವನ್ನು ಬದಲಿಸಿಕೊಂಡಿದ್ದರೆ, 5.53 ಲಕ್ಷ ಮಂದಿ ಎರಡು ಕಡೆ ಹೆಸರು ನೋಂದಾಯಿಸಿದ ಕಾರಣ ಪಟ್ಟಿಯಿಂದ ಹೊರಗುಳಿದಿದ್ದಾರೆ.
ಮಹಿಳಾ ಮತದಾರರ ಸಂಖ್ಯೆ ಶೇ.58.78ರಿಂದ ಶೇ.60.38ಕ್ಕೆ ಹೆಚ್ಚಿದ್ದರೆ, ಲಿಂಗ ಅನುಪಾತ 827ರಿಂದ 839ಕ್ಕೆ ಏರಿದೆ. 403 ಶಾಸಕ ಬಲದ ಉತ್ತರಪ್ರದೇಶ ವಿಧಾನಸಭೆಗೆ ಫೆ.11ರಿಂದ ಚುನಾವಣೆ ನಡೆಯಲಿದೆ.
Next Story





