ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್‌ಗೆ ಕೋರ್ಟ್ ಬುಲಾವ್

ಜೋಧ್‌ಪುರ, ಜ.13: 1998ರಲ್ಲಿ ನಡೆದ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ದಾಖಲಿಸಿಕೊಳ್ಳುವ ಉದ್ದೇಶದಿಂದ ಜ.25ರಂದು ಹಾಜರಾಗುವಂತೆ ನಟರಾದ ಸಲ್ಮಾನ್ ಖಾನ್, ಸೈಫ್ ಅಲೀಖಾನ್, ಸೊನಾಲಿ ಬೇಂದ್ರೆ, ನೀಲಂ ಮತ್ತು ಟಬು ಅವರಿಗೆ ಸ್ಥಳೀಯ ಕೋರ್ಟು ತಿಳಿಸ
ಕೋರ್ಟ್‌ನಲ್ಲಿ ಇಂದು ಹಾಜರಿದ್ದ ಎಲ್ಲಾ ಸಾಕ್ಷಿದಾರರ ವಿಚಾರಣೆ ನಡೆಸಿದ ಬಳಿಕ ಮುಖ್ಯ ನ್ಯಾಯಾಧೀಶ ದಲ್‌ಪತ್ ಸಿಂಗ್ ಅವರು, ಸಲ್ಮಾನ್ ಹಾಗೂ ಇತರ ನಾಲ್ವರಿಗೆ ಈ ನಿರ್ದೇಶನ ನೀಡಿತು. 1998ರಲ್ಲಿ ‘ಹಮ್ ಸಾಥ್ ಸಾಥ್ ಹೈ’ ಸಿನೆಮಾದ ಶೂಟಿಂಗ್ ಸಂದರ್ಭ ಸಲ್ಮಾನ್ ಅಕ್ರಮ ಶಸ್ತ್ರ ಹೊಂದಿದ್ದು ಅಳಿವಿನಂಚಿನಲ್ಲಿರುವ ಕೃಷ್ಣಮೃಗವನ್ನು ಬೇಟೆಯಾಡಿದ್ದರು ಮತ್ತು ಈ ವೇಳೆ ಇತರ ನಾಲ್ವರು ನಟರು ಇವರಿಗೆ ಸಹಕಾರ ನೀಡಿದ್ದರು ಎಂಬ ಆರೋಪದ ವಿಚಾರಣೆ ನಡೆಯುತ್ತಿದೆ. ಸಲ್ಮಾನ್ ಅಕ್ರಮ ಶಸ್ತ್ರ ಹೊಂದಿದ್ದ ಆರೋಪದ ತೀರ್ಪು ಜನವರಿ 18ರಂದು ಹೊರಬೀಳಲಿದೆ.
Next Story





