ಕನ್ಯಾನದಲ್ಲಿ ಶೂಟೌಟ್ : ವ್ಯಕ್ತಿ ಸಾವು

ಬಂಟ್ವಾಳ , ಜ.13 : ಶೂಟೌಟ್ ನಿಂದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಇಂದಿಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಬಂಟ್ವಾಳ ಬ.ಕಸಬಾ ಗ್ರಾಮದ ನೆಕ್ಕರೆಕಾಡು ನಿವಾಸಿ ಇಂದ್ರೇಶ್ (55) ಎಂದು ಗುರುತಿಸಲಾಗಿದೆ.
ಕೌಟುಂಬಿಕ ಕಲಹವೇ ಈ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ.
ಮೃತನ ಮಗ ಚಂದ್ರಹಾಸನಿಂದಲೇ ಈ ಕೊಲೆ ನಡೆದಿರಬಹುದು ಎಂದು ಸಂಶಯ ವ್ಯಕ್ತವಾಗಿದ್ದು , ಸ್ವತಃ ಮೃತನೇ ಆತ್ಮಹತ್ಯೆಗೈದಿರಬಹುದು ಎಂಬ ಮಾತುಗಳೂ ಕೇಳಿ ಬರುತ್ತಿದೆ. ಪೊಲೀಸರು ಎರಡೂ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದು , ನಿಜವಾದ ವಿಷಯ ಇನ್ನಷ್ಟೇ ಹೊರಬರಬೇಕಿದೆ.
ತಂದೆ ಮಗನ ನಡುವೆ ಪ್ರತೀ ದಿನ ಜಗಳ ನಡೆಯುತ್ತಿದ್ದು , ಇಂದು ತಾಯಿ ಪಕ್ಕದ ಮನೆಗೆ ಹೋದ ಸಂದರ್ಭದಲ್ಲಿ ಈ ಶೂಟೌಟ್ ನಡೆದಿದೆ.
ನಾಡಕೋವಿಯಿಂದ 3 ಸುತ್ತು ಗುಂಡು ಹಾರಿಸಲಾಗಿದ್ದು , ಈ ಸಂದರ್ಭ ಮಗನ ಕೈಗೆ ಗಾಯವಾಗಿದೆ. ಮಗನನ್ನು ಆಸ್ಪತ್ರಗೆ ದಾಖಲಿಸಲಾಗಿದೆ.
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು , ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
Next Story





