ಸಿನಿಮೀಯ ರೀತಿಯಲ್ಲಿ ಗುಂಡಿಕ್ಕಿ ವಕೀಲನ ಕೊಲೆ
ಆಸ್ಪತ್ರೆಗೆ ದಾಖಲಿಸಿದ ಯುವತಿ ನೇಣಿಗೆ ಶರಣು

ಬೆಂಗಳೂರು, ಜ.13: ಸಿನಿಮೀಯ ರೀತಿಯಲ್ಲೇ ನಗರದಲ್ಲಿ ವಕೀಲರೊಬ್ಬ ರನ್ನು ಬಂದೂಕಿನಿಂದ ಗುಂಡಿಟ್ಟು ಕೊಲೆಗೈದಿರುವ ದುರ್ಘಟನೆ ಶುಕ್ರವಾರ ನಡೆದಿದೆ.
ನಗರದ ಹೆಸರುಘಟ್ಟ ಸಮೀಪದ ಆಚಾರ್ಯ ಕಾಲೇಜು ಬಳಿ ಮಹಿಳೆಯ ಜತೆಯಿದ್ದ ವಕೀಲ ಅಮಿತ್(32) ಎಂಬವರನ್ನು ಗುಂಡಿಟ್ಟು ಕೊಲೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎದೆಗೆ ಗುಂಡು ಹೊಕ್ಕು ಗಂಭೀರವಾಗಿ ಗಾಯಗೊಂಡಿದ್ದ ಅಮಿತ್ ಅವರನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದ ಶೃತಿಗೌಡ(28) ಎಂಬವರು ಆಸ್ಪತ್ರೆ ಸಮೀಪದ ವಸತಿ ಗೃಹದ ಕೊಠಡಿಯಲ್ಲಿ (ಲಾಡ್ಜ್) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೃತಿಗೌಡ ಗ್ರಾಮ ಪಂಚಾಯತ್ ಅಭಿವೃದ್ಧಿ ಅಕಾರಿ(ಪಿಡಿಒ) ಆಗಿದ್ದಾರೆ.
ವಕೀಲ ಅಮಿತ್‌ಗೆ ಗುಂಡು ಹೊಡೆದ ಕಗ್ಗಲೀಪುರ ನಿವಾಸಿ ಗೋಪಾಲಕೃಷ್ಣ(78) ಎಂಬಾತನನ್ನು ಬಂಸಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಕಾರಿ ಯೊಬ್ಬರು ಮಾಹಿತಿ ನೀಡಿದ್ದಾರೆ. ಗೋಪಾಲಕೃಷ್ಣ ಆತ್ಮಹತ್ಯೆ ಮಾಡಿಕೊಂಡ ಶೃತಿಗೌಡ ಅವರ ಮಾವ ಎನ್ನಲಾಗಿದೆ.
ಘಟನೆ ಹಿನ್ನೆಲೆ: ಶುಕ್ರವಾರ ಹೆಸರುಘಟ್ಟ ಸಮೀಪದ ಆಚಾರ್ಯ ಕಾಲೇಜು ಬಳಿ ಕಾರಿನಲ್ಲಿ ಅಮಿತ್ ಮತ್ತು ಶೃತಿಗೌಡ ಕುಳಿತಿದ್ದರು. ಈ ವಿಚಾರ ಗೊತ್ತಾಗಿ ಕಾರಿನಲ್ಲಿ ಬಂದ ಶೃತಿಗೌಡ ಮಾವ ಗೋಪಾಲಕೃಷ್ಣ, ಅಮಿತ್ ಕಾರಿಗೆ ಢಿಕ್ಕಿ ಹೊಡೆದು, ಬಳಿಕ ಪರವಾನಿಗೆ ಇರುವ ಬಂದೂಕಿನಿಂದ ಅಮಿತ್ ಎದೆೆಗೆ ಗುಂಡು ಹಾರಿಸಿದ್ದಾರೆ. ತಕ್ಷಣ ಶೃತಿಗೌಡ ಅದೇ ಕಾರಿನಲ್ಲಿ ಅಮಿತ್ ಅವರನ್ನು ತುಮಕೂರು ರಸ್ತೆಯ 8ನೆ ಮೈಲಿ ಸಮೀಪದ ಸಪ್ತಗಿರಿ ಆಸ್ಪತ್ರೆಗೆ ಕರೆತಂದು ಸಂಜೆ 4ರ ಸುಮಾರಿಗೆ ದಾಖಲಿಸಿದ್ದಾರೆ. ಈ ವೇಳೆ ದಾಖಲೆ ಪುಸ್ತಕದಲ್ಲಿ ಗಾಯಾಳು ಹೆಸರು ಅಮಿತ್ ಎಂದು ಬರೆಸಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆಗಾಗಿ ಅಮಿತ್ ಅವರನ್ನು ಒಳಗೆ ಕರೆದೊಯ್ದರೂ ಚಿಕಿತ್ಸೆ ಲಿಸದೆ ಅವರು ಮೃತಪಟ್ಟಿದ್ದಾರೆ. ಕೂಡಲೇ ವೈದ್ಯರು ವಿಷಯ ತಿಳಿಸಲು ಹೊರ ಬಂದು ನೋಡಿದಾಗ, ಅಮಿತ್‌ರನ್ನು ಆಸ್ಪತ್ರೆಗೆ ದಾಖಲಿಸಿದ ಶೃತಿಗೌಡ ಪರಾರಿಯಾಗಿರುವುದು ಗೊತ್ತಾಗಿದೆ. ಬಳಿಕ ಆಸ್ಪತ್ರೆ ಸಿಬ್ಬಂದಿ ಪೀಣ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೆಲವೇ ಗಂಟೆಗಳಲ್ಲಿ ಆಸ್ಪತ್ರೆ ಸಮೀಪದ ಲಾಡ್ಜ್‌ನಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿ ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯೇ ಅಮಿತ್‌ನನ್ನು ಆಸ್ಪತ್ರೆಗೆ ಸೇರಿಸಿದವರು ಎಂಬುದು ತಿಳಿದು ಬಂದಿದೆ.
ಹತ್ಯೆಯಾದ ವಕೀಲ ಅಮಿತ್ ನೆಲಮಂಗಲ ವಕೀಲರ ಸಂಘದ ಅಧ್ಯಕ್ಷರ ಪುತ್ರ. ಆತ್ಮಹತ್ಯೆ ಮಾಡಿಕೊಂಡ ಶೃತಿಗೌಡ, ರೈಲ್ವೇ ಗೊಲ್ಲರಹಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಕಾರಿ(ಪಿಡಿಒ). ಇನ್ನು, ಅಮಿತ್‌ಗೆ ಗುಂಡು ಹಾರಿಸಿದ ಗೋಪಾಲಕೃಷ್ಣ, ಶೃತಿಗೌಡ ಅವರ ಮಾವ ಎನ್ನಲಾಗಿದ್ದು, ಈಗಾಗಲೇ ಮದುವೆಯಾಗಿ 4 ವರ್ಷದ ಮಗುವಿರುವ ಅಮಿತ್ ಜೊತೆ ಶೃತಿಗೌಡರಿಗಿದ್ದ ಅನೈತಿಕ ಸಂಬಂಧವೇ ಶೂಟೌಟ್‌ಗೆ ಕಾರಣ ಎಂದು ತಿಳಿದುಬಂದಿದೆ.







