ಮಂಗಳೂರು ಎಪಿಎಂಸಿ: ಫಲಿತಾಂಶ ಪ್ರಕಟ
ಮಂಗಳೂರು, ಜ.14: ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ 14 ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಿದೆ. 32,968 ಮತದಾನದ ಪೈಕಿ 11,942 ಮಂದಿ ಗುರುವಾರ ಮತ ಚಲಾಯಿಸಿದ್ದು, ಶೇ.36.22 ಮತದಾನವಾಗಿತ್ತು. 1ನೆ ಮುಲ್ಕಿ ಕ್ಷೇತ್ರದಲ್ಲಿ ಹಿಂದುಳಿದ ವರ್ಗ (ಬಿ)ದ ಜೋಯಿಲ್ ಡಿಸೋಜ, 2ನೆ ಮುಲ್ಕಿ ಕ್ಷೇತ್ರದಲ್ಲಿ ಸಾಮಾನ್ಯ ವರ್ಗದ ಪ್ರಮೋದ್ ಕುಮಾರ್, 3ನೆ ಕಲ್ಲಮುಂಡ್ಕೂರು ಕ್ಷೇತ್ರದಲ್ಲಿ ಸಾಮಾನ್ಯ ವರ್ಗದ ಚಂದ್ರಹಾಸ ಸನಿಲ್, 4ನೆ ಪುತ್ತಿಗೆ ಕ್ಷೇತ್ರದಲ್ಲಿ ಸಾಮಾನ್ಯ ವರ್ಗದ ಕೆ. ಕೃಷ್ಣರಾಜ ಹೆಗ್ಡೆ, 5ನೆ ಮೂಡುಬಿದಿರೆ ಕ್ಷೇತ್ರದ ಅನುಸೂಚಿತ ಜಾತಿಯ ಶೀನ, 6ನೆ ಶಿರ್ತಾಡಿ ಕ್ಷೇತ್ರದಲ್ಲಿ ಸಾಮಾನ್ಯ ವರ್ಗದ ಪ್ರವೀಣ್ ಕುಮಾರ್ ಎಸ್., 7ನೆ ಸುರತ್ಕಲ್ ಕ್ಷೇತ್ರದಲ್ಲಿ ಸಾಮಾನ್ಯ ವರ್ಗದ ರಜನಿ ದುಗ್ಗಣ್ಣ, 8ನೆ ಎಡಪದವು ಕ್ಷೇತ್ರದಲ್ಲಿ ಅನುಸೂಚಿತ ಪಂಗಡದ ರುಕ್ಕಯ ನಾಯ್ಕ, 9ನೆ ವಾಮಂಜೂರು ಕ್ಷೇತ್ರದಲ್ಲಿ ಮಹಿಳಾ ವರ್ಗದ ವಾಣಿ ಆರ್. ಶೆಟ್ಟಿ, 10ನೆ ಮಂಗಳೂರು ಕ್ಷೇತ್ರದಲ್ಲಿ ಹಿಂದುಳಿದ ವರ್ಗ (ಎ)ದ ಭರತೇಶ್ ಅಮೀನ್, 11ನೆ ಕೋಟೆಕಾರ್ ಕ್ಷೇತ್ರದಲ್ಲಿ ಮಹಿಳಾ ವರ್ಗದ ಮುತ್ತು ಎನ್. ಶೆಟ್ಟಿ ಗೆಲುವು ಸಾಧಿಸಿದ್ದಾರೆ.
12ನೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶಗಳ ವರ್ತಕರ ಕ್ಷೇತ್ರದಿಂದ ಬಿ. ರಾಘವ ಶೆಟ್ಟಿ, 13ನೆ ಸಹಕಾರ ಸಂಘಗಳ ಕ್ಷೇತ್ರದಿಂದ ಪುರುಷೋತ್ತಮ ಶೆಟ್ಟಿ, 14ನೆ ಕೃಷಿ ಹುಟ್ಟುವಳಿ, ಮಾರಾಟ, ವ್ಯವಹಾರಗಳಲ್ಲಿ ತೊಡಗಿರುವ ಸಂಸ್ಕರಣಾ ಸಹಕಾರಿ ಸಂಘಗಳ ಕ್ಷೇತ್ರದಲ್ಲಿ ಬಿ. ತಿಮ್ಮಪ್ಪ ಶೆಟ್ಟಿ ಗೆದ್ದಿದ್ದಾರೆ.





