ಕದ್ರಿ: ಕಾಂಕ್ರಿಟ್ ರಸ್ತೆ ಉದ್ಘಾಟನೆ

ಮಂಗಳೂರು, ಜ.14: ನಗರದ ಕದ್ರಿ ದ್ವಾರದಿಂದ ಕದ್ರಿ ಮಂಜುನಾಥ ದೇವಸ್ಥಾನವರೆಗಿನ 850 ಮೀ. ಉದ್ದದ ಕಾಂಕ್ರಿಟ್ ರಸ್ತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಶನಿವಾರ ಉದ್ಘಾಟಿಸಿದರು.
ಬಳಿಕ ಕದ್ರಿ ದೇವಸ್ಥಾನದ ವಠಾರದಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅಭಿವೃದ್ಧಿಯ ವಿಚಾರದಲ್ಲಿ ನಿರ್ಲಕ್ಷ ಸಲ್ಲದು. ಮಂಗಳೂರು ನಗರವು ರಾಜ್ಯದ ಉದ್ದಿಮೆ, ವಾಣಿಜ್ಯ ವ್ಯವಹಾರಗಳ ಹೆಬ್ಬಾಗಿಲಾಗಿದೆ. ಸ್ವಚ್ಛತೆಗೆ ಒತ್ತುಕೊಟ್ಟರೆ ದೇಶಕ್ಕೆ ಮಾದರಿ ನಗರವನ್ನು ಕೊಡುಗೆಯಾಗಿ ನೀಡಿದಂತಾಗಬಹುದು ಎಂದರು.
ಶಾಸಕ ಜೆ. ಆರ್. ಲೋಬೊ ಮಾತನಾಡಿ, ಕದ್ರಿಯಲ್ಲಿ 75 ಲಕ್ಷ ರೂ.ಗಳ ಸ್ಮಶಾನ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಇದರೊಂದಿಗೆ ಭೂಗತ ವಿದ್ಯುತ್ ಕೇಬಲ್ ಅಳವಡಿಕೆ ಕಾರ್ಯವು ಮೆಸ್ಕಾಂ ಸಹಾಯದೊಂದಿಗೆ ಕೆಪಿಟಿಸಿಎಲ್‌ನಿಂದ ನಡೆಯಲಿದೆ ಎಂದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕದ್ರಿ ಯೋಗೀಶ್ವರ ಮಠದ ಮಠಾಧೀಶ ನಿರ್ಮಲನಾಥ್ ಸ್ವಾಮೀಜಿ, ಕದ್ರಿ ದೇವಸ್ಥಾನದ ತಂತ್ರಿ ದೇರೆಬೈಲು ವಿಠಲದಾಸ ತಂತ್ರಿ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಮೇಯರ್ ಹರಿನಾಥ್, ಪಾಲಿಕೆ ಸಚೇತಕ ಶಶಿಧರ್ ಹೆಗ್ಡೆ, ಮಾಜಿ ಮೇಯರ್ ಕೆ. ಅಶ್ರ್, ನಗರ ಯೋಜನೆ ಸ್ಥಾಯಿ ಸಮಿತಿಯ ಲ್ಯಾನ್ಸಿ ಲೊಟ್ ಪಿಂಟೊ, ಕಾರ್ಪೋರೇಟರ್‌ಗಳಾದ ಪ್ರತಿಭಾ ಕುಳಾಯಿ, ಕವಿತಾ ಸನಿಲ್, ಭಾಸ್ಕರ, ರಾಧಾಕೃಷ್ಣ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಕಾರ್ಪೋರೇಟರ್ ಡಿ.ಕೆ. ಅಶೋಕ್‌ಕುಮಾರ್, ರಸ್ತೆ ಕಾಮಗಾರಿಗೆ ಸಹಕರಿಸಿದ ಪ್ರಭಾಕರ ಯೆಯ್ಯೆಡಿ, ಲಕ್ಷ್ಮಣ ಪೂಜಾರಿ, ಯಶವಂತ್, ಪ್ರವೀಣ್‌ರನ್ನು ಸನ್ಮಾನಿಸಲಾಯಿತು. ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.







