ರಾಮವಿಲಾಸ್ ಪಾಸ್ವಾನ್ ಆಸ್ಪತ್ರೆಯಿಂದ ಬಿಡುಗಡೆ

ಪಟ್ನಾ,ಜ.13: ಉಸಿರಾಟದ ತೊಂದರೆಯಿಂದಾಗಿ ಗುರುವಾರ ಇಲ್ಲಿಯ ಪಾರಸ್ ಎಚ್‌ಎಂಆರ್‌ಐ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲ್ಪಟಿದ್ದ ಕೇಂದ್ರ ಸಚಿವ ಹಾಗೂ ಎಲ್‌ಜೆಪಿ ಅಧ್ಯಕ್ಷ ರಾಮವಿಲಾಸ್ ಪಾಸ್ವಾನ್ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಂದು ಆಸ್ಪತ್ರೆಯಿಂದ ಅವರನ್ನು ಬಿಡುಗಡೆ ಗೊಳಿಸಲಾಗಿದೆ.
ಸಚಿವರು ಸಂಜೆ ದಿಲ್ಲಿಗೆ ತೆರಳಲಿದ್ದಾರೆ ಎಂದು ಅವರ ವಿಶೇಷ ಕರ್ತವ್ಯಾಧಿಕಾರಿ ಆರ್.ಸಿ.ಮೀನಾ ತಿಳಿಸಿದರು.
Next Story





