ಜ.15ರಂದು ವೆಲ್ಫೇರ್‍ಪಾರ್ಟಿ ಕಾರ್ಯಕರ್ತರ ಸಮಾವೇಶ

ಮಂಗಳೂರು, ಜ.14 : ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ದಕ್ಷಿಣಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ನಗರದ ಬಂದರ್‍ನಲ್ಲಿರುವ ಹಿದಾಯತ್ ಸೆಂಟರ್ ಸಭಾಗೃಹದಲ್ಲಿ ಜ.15 ರಂದು ರವಿವಾರ ಕಾರ್ಯಕರ್ತರ ಸಮಾವೇಶ ಹಾಗೂ ತರಬೇತಿ ಕಾರ್ಯಾಗಾರ ಬೆಳಗ್ಗೆ 10:30ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ.
ವೆಲ್ಫೇರ್‍ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಅಧ್ಯಕ್ಷೆ ಹಾಗೂ ಮಾಜಿ ಸಚಿವೆ ಡಾ. ಬಿ.ಟಿ. ಲಲಿತಾ ನಾಯಕ್, ರಾಜ್ಯ ನಾಯಕರಾದ ಶ್ರೀಕಾಂತ್ ಸಾಲಿಯಾನ್,ತಾಹೆರ್ ಹುಸೈನ್, ಮೊಯಿನ್ ಕಮರ್, ನಿಕಟಪೂರ್ವ ರಾಜ್ಯಾಧ್ಯಕ್ಷ ಅಕ್ಬರ್ ಅಲಿ ಉಡುಪಿ, ಮಡಿಕೇರಿಯ ನ್ಯಾಯವಾದಿ ಅಬ್ದುಲ್ಲಕುಂಞ ಮೊದಲಾದವರು ಭಾಗವಹಿಸಲಿದ್ದಾರೆಂದು ವೆಲ್ಫೇರ್ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
Next Story





