ಉಡುಪಿ: 4.95ಕೋ.ರೂ. ವಿವಿಧ ಕಾಮಗಾರಿಗಳ ಉದ್ಘಾಟನೆ

ಉಡುಪಿ, ಜ.14: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸುಮಾರು 4.95 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮ ಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ಶನಿವಾರ ನೆರವೇರಿಸಿದರು.
ಕುತ್ಪಾಡಿಯ ಬ್ರಹ್ಮ ಬೈದರ್ಕಳ ಗರಡಿ ಬಳಿ 35 ಲಕ್ಷ ರೂ. ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ, 1.80 ಕೋಟಿ ರೂ. ವೆಚ್ಚದ ಹೊಡೆ -ತೊಟ್ಟಂ ರಸ್ತೆ ಕಾಂಕ್ರೀಟೀಕರಣ ಉದ್ಘಾಟನೆ, 45 ಲಕ್ಷ ರೂ. ವೆಚ್ಚದ ಬಡಾ ನಿಡಿಯೂರು- ತೊಟ್ಟಂ ರಸ್ತೆಯ ಸೇತುವೆ ಕಾಮಗಾರಿ ಉದ್ಘಾಟನೆ, 10 ಲಕ್ಷ ರೂ. ವೆಚ್ಚದ ಕಲ್ಮಾಡಿ ಬಬ್ಬರ್ಯಪಾದೆ ರಸ್ತೆ ಕಾಂಕ್ರೀಟೀಕರಣ ಕಾಮ ಗಾರಿ ಉದ್ಘಾಟನೆ, 2 ಕೋಟಿ ವೆಚ್ಚದಲ್ಲಿ ಬೊಬ್ಬರ್ಯಪಾದೆ ಜೆಟ್ಟಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ, ಕೊಡವೂರಿನ ಕಂಗನಬೆಟ್ಟುವಿನ ಕಂಗೂರು ಮಠ ಬಳಿ 25 ಲಕ್ಷ ರೂ. ವೆಚ್ಚದಲ್ಲಿ ಸರಕಾರಿ ಕೆರೆ ಶಿಲಾನ್ಯಾಸ ಕಾಮಗಾರಿ ಗಳನ್ನು ಸಚಿವ ಪ್ರಮೋದ್ ನೆರವೇರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಜಿಪಂ ಸದಸ್ಯ ಜನಾರ್ದನ ತೋನ್ಸೆ, ಮಾಜಿ ಜಿಪಂ ಸದಸ್ಯ ದಿವಾಕರ್ ಕುಂದರ್, ಸತೀಶ್ ಅಮೀನ್ ಪಡುಕೆರೆ ಮೊದಲಾದವರು ಉಪಸ್ಥಿತರಿದ್ದರು.





