ಬಂಟ್ವಾಳ : ತೌಹೀದ್ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

ವಿಟ್ಲ , ಜ.14 : ಬಂಟ್ವಾಳ-ಕೆಳಗಿನಪೇಟೆಯ ತೌಹೀದ್ ಅರೇಬಿಕ್ ಮದ್ರಸದ ವತಿಯಿಂದ ಮಿಲಾದ್ ಪ್ರಯುಕ್ತ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇತ್ತೀಚೆಗೆ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಶಾಲಾಡಳಿತ ಮಂಡಳಿ ಅಧ್ಯಕ್ಷ ಬಿ.ಎ. ಸುಲೈಮಾನ್ ಅಧ್ಯಕ್ಷತೆ ವಹಿಸಿದ್ದರು.
ಸ್ಥಳೀಯ ಮುದರ್ರಿಸ್ ಸಿ.ಎಂ. ಅನ್ಸಾರ್ ಫೈಝಿ ಉದ್ಘಾಟಿಸಿದರು.
ಶಾಲಾ ಸಂಚಾಲಕ ಹಾಜಿ ಮುಹಮ್ಮದಾಲಿ ಎ.ಆರ್., ಕೋಶಾಧಿಕಾರಿ ಮುಹಮ್ಮದ್ ಸಾದಿಕ್ ಬಿ.ಎಚ್.ಬಿ., ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶಬೀರ್ ಅಹ್ಮದ್, ಉಪಾಧ್ಯಕ್ಷ ಮುಹಮ್ಮದ್ ರಫೀಕ್, ಕೋಶಾಧಿಕಾರಿ ಬಿ.ಎಂ. ಇಲ್ಯಾಸ್, ಕ್ರೀಡಾ ಕಾರ್ಯದರ್ಶಿ ಬಿ.ಎಂ. ಬಶೀರ್, ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಅರಬಿ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ಅರಬಿಕ್ ಮದ್ರಸದ ಮುಖ್ಯ ಶಿಕ್ಷಕರಾಗಿದ್ದ ಬಿ.ಕೆ. ಯೂಸುಫ್ ಮುಸ್ಲಿಯಾರ್ , ಕೆ. ಹಾಫಿರ್ ಮುಹಮ್ಮದ್ ಸಾಬಿತ್ ಕೆಳಗಿನಪೇಟೆ ಅವರನ್ನು ಸನ್ಮಾನಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ಅಬೂಬಕ್ಕರ್ ಸಿದ್ದೀಕ್ ರಹ್ಮಾನಿ ಸ್ವಾಗತಿಸಿದರು , ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಬಿ.ಎ. ಮುಹಮ್ಮದ್ ಪ್ರಸ್ತಾವನೆಗೈದರು.
ಶಿಕ್ಷಕ ಮುಸ್ತಫ ಫೈಝಿ ವಂದಿಸಿದರು. ಇಬ್ರಾಹಿಂ ಬಾತಿಷ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.





