ವಾಸುದೇವನ್ ನಾಯರ್ ವಿರುದ್ದದ ಬಿಜೆಪಿ ಟೀಕೆಗೆ ಪಕ್ಷದ ಮುಖಂಡನಿಂದಲೇ ಅಸಮಾಧಾನ

ಕಣ್ಣೂರ್,ಜ.14: ಎಂಟಿ ವಾಸುದೇವನ್ ನಾಯರ್, ಅವರನ್ನು ದೂಷಿಸಿಸುವ ಸಂಘಪರಿವಾರದ ನಿಲುವನ್ನು ಬಿಜೆಪಿ ಹಿರಿಯ ನಾಯಕ ಹಾಗೂ ಕೇರಳದ ಮಾಜಿ ಅಧ್ಯಕ್ಷ ಸಿಕೆ ಪದ್ಮನಾಭನ್ ಬಹಿರಂಗವಾಗಿ ವಿರೋಧಿಸಿದ್ದಾರೆಂದು ಕೇರಳದ ವೆಬ್‌ಪೋರ್ಟಲೊಂದು ವರದಿಮಾಡಿದೆ.
ಎಂಟಿ ವಾಸುದೇವನ್ ನಾಯರ್, ನಿರ್ದೇಶಕ ಕಮಲ್, ಚೆಗುವೇರಾರ ವಿರುದ್ಧ ಸಂಘಪರಿವಾರ ತಪ್ಪು ನಿಲುವು ವ್ಯಕ್ತಪಡಿಸಿದೆ ಎಂದ ಅವರು, ಕಮಲ್‌ರ ದೇಶ ಪ್ರೇಮವನ್ನು ಯಾರೂಪ್ರಶ್ನಿಸಬೇಕಿಲ್ಲ ಎಂದಿದ್ದಾರೆ.
ಚೆಗುವೇರಾ ಬಗ್ಗೆ ಗೊತ್ತಿಲ್ಲದವರು ಅವರನ್ನು ಟೀಕಿಸುತ್ತಿದ್ದಾರೆ. ನಿರ್ದೇಶಕ ಕಮಲ್ ಪಾಕಿಸ್ತಾನಕ್ಕೆ ಹೋಗಬೇಕು ಎನ್ನುವುದು ಎಎನ್ ರಾಧಾಕೃಷ್ಣನ್‌ರ ವೈಯಕ್ತಿಕ ಹೇಳಿಕೆ. ಕಮಲ್ ದೇಶಪ್ರೇಮಾಧಾರಿತ ಹಲವು ಚಲನಚಿತ್ರಗಳನ್ನು ನಿರ್ದೇಶಿಸಿರುವರು. ಅವರನ್ನು ಪಾಕಿಸ್ತಾನಕ್ಕೆ ಹೋಗಬೇಕು ಎನ್ನುವುದು ಸರಿಯಾದ ನಿಲುವಲ್ಲ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಸಿಕೆ ಪದ್ಮನಾಭನ್ ಪೀಪಲ್ಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ನೋಟು, ಅಮಾನ್ಯ ವಿಷಯದಲ್ಲಿ ತನ್ನ ನಿಲುವು ವ್ಯಕ್ತಪಡಿಸಿದ್ದ ವಾಸುದೇವನ್ ನಾಯರ್‌ರನ್ನು ವಿರೋಧಿಸಿದ ಬಿಜೆಪಿ ನಾಯಕರನ್ನು ಸಿಕೆ ಪದ್ಮನಾಭನ್ ಕಟುವಾಗಿ ಟೀಕಿಸಿದ್ದರು. ಎಂಟಿಗೆ ಕಲ್ಲೆಸೆದು ಆತ್ಮತೃಪ್ತಿಅನುಭವಿಸುವವರು ತಮ್ಮನ್ನು ತಿದ್ದಿಕೊಳ್ಳಲಿ ಎಂದು ಪದ್ಮನಾಭನ್ ಹೇಳಿದ್ದಾರೆ.
ಬೊಲಿವಿಯನ್ ಹೋರಾಟದ ನಾಯಕ ಚೆಗುವೇರಾರನ್ನು ವಿರೋಧಿಸುವವರು ಅವರು ಯಾರೆಂದು ಮೊದಲು ಕಲಿಯಲಿ. ಬೊಲಿವಿಯನ್ ಡೈರಿ ಓದಲಿ. ಟೀಕಿಸುವವರು ಚೆಗುವೇರಾರನ್ನು ಆಧ್ಯಯನ ಮಾಡಬೇಕು. ಪೂರ್ವಗ್ರಹಗಳಿಂದಮಾತಾಡಬಾರದು ಎಂದು ಅವರು ಪೀಪಲ್ಸ್ ಟಿವಿಗೆ ತಿಳಿಸಿದ್ದಾರೆ. ನೋಟು ಅಮಾನ್ಯವಿರುದ್ಧ ಮಾತಾಡಿದ ಎಂಟಿ ವಾಸುದೇವನ್ ನಾಯರ್‌ರನ್ನು, ರಾಷ್ಟ್ರಗೀತೆ ವಿಚಾರದಲ್ಲಿ ಚಿತ್ರ ನಿರ್ದೇಶಕ ಕಮಲ್‌ರನ್ನುಕಳೆದ ಕೆಲವು ದಿವಸಗಳಿಂದ ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ಬಿಜೆಪಿ ನಾಯಕ ರಾಧಾಕೃಷ್ಣನ್ ಇತ್ತೀಚೆಗೆ ಚೆಗುವೇರಾ ವಿರುದ್ಧ ಮಾತಾಡಿದ್ದರು. ಇವೆಲ್ಲವನ್ನು ಕೇರಳ ಬಿಜೆಪಿಯ ಹಿರಿಯ ನಾಯಕ ಸಿಕೆ ಪದ್ಮನಾಭನ್ ವಿರೋಧಿಸಿ ಪೀಪಲ್ಸ್ ಟೀವಿಯಲ್ಲಿ ಮಾತಾಡಿದ್ದಾರೆಂದು ವರದಿಯಾಗಿದೆ.







