ಜ.15ರಂದು ಮದನಿ-ತಾಜುಲ್ ಉಲಮಾ ಮೌಲಿದ್
ಮಂಗಳೂರು, ಜ.14: ಎಸ್‌ವೈಎಸ್ ಮತ್ತು ಎಸ್ಸೆಸ್ಸೆಫ್ ಉಳ್ಳಾಲ ಮೇಲಂಗಡಿ ಶಾಖೆಯ ವತಿಯಿಂದ ಜ.15ರಂದು ಮಗ್ರಿಬ್ ನಮಾಝ್ ಬಳಿಕ ಮೇಲಂಗಡಿಯ ಬಿಸ್ಮಿಲ್ಲಾ ಕಾಂಪೌಂಡ್‌ನಲ್ಲಿ ಮದನಿ ಮಾಲೆ ಮತ್ತು ತಾಜುಲ್ ಉಲಮಾ ಮೌಲಿದ್ ಕಾರ್ಯಕ್ರಮ ನಡೆಯಲಿದೆ.
ಉಳ್ಳಾಲ ಪಟ್ಲ ಮಸೀದಿಯ ಖತೀಬ್ ಮುಹಮ್ಮದ್ ಫೈಝಿ ಮೋಙಂ ಕಾರ್ಯಕ್ರಮ ಉದ್ಘಾಟಿಸಲಿದ್ದು, ಯಾಕೂಬ್ ಮದನಿ ಮತ್ತು ಜಾಬಿರ್ ಫಳಿಲಿ ತಂಡ ಕಾರ್ಯಕ್ರಮ ನಡೆಸಿಕೊಡಲಿದೆ.
ಜ.16ರಂದು ಮಗ್ರಿಬ್ ನಮಾಝ್ ಬಳಿಕ ಕೆ.ವೈ. ಹಂಝ ಮದನಿ ಗುರುವಾಯನಕೆರೆ ‘ಮುಸ್ಲಿಮರ ದಿನಚರಿ’ ಎಂಬ ವಿಷಯದಲ್ಲಿ ಪ್ರವಚನ ನೀಡಲಿದ್ದಾರೆ.
ಜ.17ರಂದು ಮಗ್ರಿಬ್ ನಮಾಝ್ ಬಳಿಕ ಅನ್ವರ್ ಅಲಿ ಶಿರಿಯಾ ನೇತೃತ್ವದಲ್ಲಿ ಮುಹಿಯ್ಯುದ್ದೀನ್ ಮಾಲೆ ಆಲಾಪನೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





