ಕಿನ್ಯದಲ್ಲಿ ತಝ್ಕಿಯತ್ ಕ್ಯಾಂಪ್
ಮಂಗಳೂರು, ಜ.14: ನಾಟೆಕಲ್ ಸಮೀಪದ ಮಂಗಳಾ ನಗರದಲ್ಲಿ ಕಾರ್ಯಾಚರಿಸುತ್ತಿರುವ ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡಮಿಯ ಅಧೀನದಲ್ಲಿರುವ ಕಾತಿಬಿಯ್ಯ ಸ್ಟೂಡೆಂಟ್ ಅಸೋಸಿಯೇಶನ್ನ ಪಂಚರ್ವಾಕದ ಪ್ರಯುಕ್ತ ‘ತಝ್ಕಿಯತ್ ಕ್ಯಾಂಪ್’ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಸಂಸ್ಥೆಯ ಜೊತೆ ಕಾರ್ಯದರ್ಶಿ ಇಸಾಕ್ ಹಾಜಿ ನಾಟೆಕಲ್ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಮುದರ್ರಿಸ್ ಸುಲೈಮಾನ್ ಫೈಝಿ ಕುಶಾಲನಗರ ಸಭೆಯನ್ನು ಉದ್ಘಾಟಿಸಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿರಾಜುದ್ದೀನ್ ಅಲಂಕಾರು, ಉಪನ್ಯಾಸಕ ಕೆ.ಮುಹಮ್ಮದ್ ರಿಯಾಝ್ ವೇಣೂರು ಮಾತನಾಡಿದರು.
ಸಂಸ್ಥೆಯ ಪ್ರಾಂಶುಪಾಲ ಕೆ.ಎಂ. ಖಾಸಿಂ ದಾರಿಮಿ ಕಿನ್ಯ ತಝ್ಕಿಯತ್ ಕ್ಯಾಂಪ್ನ ಬಗ್ಗೆ ವಿಷಯ ಮಂಡಿಸಿದರು.
ಸಂಸ್ಥೆಯ ಅಧ್ಯಕ್ಷ ಸೈಯ್ಯದ್ ಅಮೀರ್ ತಂಙಳ್ ಅಲ್ಬುಖಾರಿ ಕಿನ್ಯ ಉಪಸ್ಥಿತರಿದ್ದರು.
ಸಂಘಟನೆಯ ಅಧ್ಯಕ್ಷ ಮುಹಮ್ಮದ್ ಶಫೀಕ್ ಕಕ್ಕಿಂಜೆ ಸ್ವಾಗತಿಸಿದರು.
Next Story