ದೊರೆ ಸಲ್ಮಾನ್ ಪರಿಹಾರ ನಿಧಿಯಿಂದ 4632 ಕೋಟಿ ರೂ. ನೆರವು

ಜಿದ್ದಾ, ಜ. 14: ದೊರೆ ಸಲ್ಮಾನ್ ಪರಿಹಾರ ಮತ್ತು ಮಾನವೀಯ ನೆರವು ಕೇಂದ್ರ (ಕೆಎಸ್‌ರಿಲೀಫ್)ದ ಮುಖಾಂತರ ಈವರೆಗೆ 172 ಯೋಜನೆಗಳ ಮೂಲಕ ನಾಲ್ಕು ಖಂಡಗಳಲ್ಲಿರುವ 33 ದೇಶಗಳಲ್ಲಿ 680 ಮಿಲಿಯ ಡಾಲರ್ (4632 ಕೋಟಿ ರೂಪಾಯಿ)ಗೂ ಅಧಿಕ ವೆಚ್ಚದಲ್ಲಿ ಮಾನವೀಯ ಮತ್ತು ಪರಿಹಾರ ಕಾರ್ಯವನ್ನು ನಡೆಸಲಾಗಿದೆ.ಕೆಎಸ್‌ರಿಲೀಫ್ ಸ್ಥಾಪನೆಯನ್ನು ದೊರೆ ಸಲ್ಮಾನ್ 2016 ಮೇ ತಿಂಗಳಲ್ಲಿ ಘೋಷಿಸಿದ್ದರು.
ಆಹಾರ ಭದ್ರತೆ, ಮರಳು ಶಿಬಿರ ನಿರ್ವಹಣೆ, ಶಿಕ್ಷಣ, ರಕ್ಷಣೆ, ಆರೋಗ್ಯ ಮತ್ತು ಪೌಷಿಕತೆ, ನೀರು ಮತ್ತು ಪರಿಸರ ಸ್ವಚ್ಚತೆ, ತುರ್ತು ಸಂಪರ್ಕಗಳು ಮತ್ತು ಸಾಮಗ್ರಿ ಪೂರೈಕೆ ಹಾಗೂ ಸಮನ್ವಯ ಮತ್ತು ಮಾನವೀಯ ಕಾರ್ಯಾಚರಣೆ ಕ್ಷೇತ್ರಗಳಲ್ಲಿ ನೆರವು ನೀಡಲಾಗಿದೆ.
ಈ ನಿಧಿಯ ಮನೆ ನಿರ್ಮಾಣ ಮತ್ತು ಆಹಾರ ಭದ್ರತೆ ಯೋಜನೆಗಳು ಮತ್ತು ಶಿಬಿರಗಳ ನಿರ್ವಹಣೆ ಕಾರ್ಯಕ್ರಮಗಳಿಂದ 2.35 ಕೋಟಿ ಜನರು ಪ್ರಯೋಜನ ಪಡೆದಿದ್ದಾರೆ.
Next Story





