ಕಾಪುವಿನಲ್ಲಿ ಜಿಲ್ಲಾ ಪ್ರತಿಭಾ ಸ್ಪರ್ಧೆ

ಕಾಪು, ಜ. 14 : ಶಿಕ್ಷಣ ದೇಶಕ್ಕೆ ಬೆಳಕು ನೀಡುತ್ತದೆ, ಸ್ವಚ್ಛತೆ ಆರೋಗ್ಯಕ್ಕೆ ದಾರಿಯಾಗಿದೆ ಎಂದು ಉದ್ಯಮಿ ಮನೋಹರ ಎಸ್ ಶೆಟ್ಟಿ ಅಭಿಪ್ರಾಯಪಟ್ಟರು.
ಕಾಪು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆ ಐ ಲವ್ ಮೈ ಇಂಡಿಯಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾಗಿದೆ. ಇಂದಿನ ವಿದ್ಯಾರ್ಥಿಗಳ ಭಾವನೆಗಳು ಬದಲಾಗಿವೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಜಾಗೃತಗೊಳಿಸಲು ಪೂರಕವಾಗಿದೆ ಎಂದರು.
ವಿದ್ಯಾರ್ಥಿಗಳು ಆಶಾವಾದಿಗಳಾಗಬೇಕು. ನಿರ್ದಿಷ್ಟ ಗುರಿಯೊಂದಿಗೆ ಸಾಧನೆ ಮಾಡಿ ಎಂದು ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ಸಂಚಾಲಕ ಕೆ. ಪಿ. ಆಚಾರ್ಯ ಹೇಳಿದರು.
ಸಮೂಹ ಗಾಯನ, ನೃತ್ಯ ಸೇರಿದಂತೆ ಚರ್ಚಾ ಸ್ಪರ್ಧೆಗಳಲ್ಲಿ 9 ಶಾಲೆಯ ವಿದ್ಯಾಥಿಗಳು ಪಾಲ್ಗೊಂಡಿದ್ದರು.
ಸಂಜನಾ, ಶೃತಿ ಹಾಗೂ ಮೇಘನಾ ತೀರ್ಪುಗಾರರಾಗಿ ಭಾಗವಹಿಸಿದ್ದರು.
ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ವಿ.ಕೆ.ಉದ್ಯಾವರ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಅಗಸ್ಟಿನಾ ವಿಲ್ಫ್ರೆಢ್, ಕಿಂಡರ್‌ಗಾರ್ಡನ್‌ನ ಒಪಿಲಿಯಾ ಕುಟಿನ್ಹಾ, ಪ್ರಾಂಶುಪಾಲರಾದ ಕೃಷ್ಣರಾವ್, ವಿದ್ಯಾಧರ ಪುರಾಣಿಕ್, ಕಾರ್ಯಕ್ರಮ ಸಂಯೋಜಕಿ ಸುದಕ್ಷಿಣೆ ಇದ್ದರು.







