ಬಾಲಕನ ಮೊಬೈಲ್ ನ್ನು ಕಿತ್ತೆಸದ ಆರ್ ಪಿ ಸಿಂಗ್

ಇಂದೋರ್, ಜ.14: ಗುಜರಾತ್ ಮತ್ತು ಮುಂಬೈ ತಂಡಗಳ ನಡುವೆ ರಣಜಿ ಫೈನಲ್ ಪಂದ್ಯದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 300ನೆ ವಿಕೆಟ್ ಪಡೆದ ಆರ್ ಪಿ ಸಿಂಗ್ ಅವರು ಸೆಲ್ಫಿ ಫೋಟೊಗೆ ಆಹ್ವಾನಿಸಿದ ಅಭಿಮಾನಿ ಬಾಲಕನೊಬ್ಬನ ಮೊಬೈಲ್ ನ್ನು ಕಿತ್ತಸೆದ ಘಟನೆ ಬೆಳಕಿಗೆ ಬಂದಿದೆ.
ರಣಜಿ ಟ್ರೋಫಿ ಪಂದ್ಯದ ನಾಲ್ಕನೆ ದಿನದ ಆಟದ ವೇಳೆ ನಡೆದ ಘಟನೆಯ ವೀಡಿಯೋವನ್ನು ಯೂಟ್ಯೂಬ್ ಗೆ ಅಪ್ ಲೋಡ್ ಮಾಡಲಾಗಿದೆ. ಹೋಲ್ಕರ್ ಸ್ಟೇಡಿಯಂ ನ ಬ್ಯಾರ‍್ ಕೇಡ್ ಬಳಿ ಆಗಮಿಸಿದ ಗುಜರಾತ್ ನ ಬೌಲರ್ ಆರ್ ಪಿ ಸಿಂಗ್ ಅಭಿಮಾನಿಯ ಕೈಯಿಂದ ಮೊಬೈಲ್ ಪಡೆದು ಕ್ರೀಡಾಂಗಣದಲ್ಲಿ ಎಸೆದು ಅನುಚಿತವಾಗಿ ವರ್ತಿಸಿದರೆನ್ನಲಾಗಿದೆ. ಈ ವೀಡಿಯೊ ವೈರಲ್ ಆಗಿದೆ.
Next Story





