ಅಂಗನವಾಡಿ: ಅರ್ಜಿ ಆಹ್ವಾನ
ಮಂಗಳೂರು, ಜ.14: ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ವ್ಯಾಪ್ತಿಯ ವಿವಿಧ ಅಂಗನವಾಡಿಗಳಿಗೆ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಬಡಗ ಎಡಗ ಗ್ರಾಪಂನ ಬಿ.ಎ. ಶಾಲೆ, ಪೆರ್ಮುದೆ ಗ್ರಾಮದ ಕುತ್ತೆತ್ತೂರು ಕೇಂದ್ರಗಳಿಗೆ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಎಸೆಸೆಲ್ಸಿ ಉತ್ತೀರ್ಣರಾಗಿರುವ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅದೇರೀತಿ, ತೆಂಕಮಿಜಾರು ಗ್ರಾಮದ ಗುಂಡೀರು, ನಿಡ್ಡೋಡಿ ಬಾಪೂಜಿ, ಹೊಸಬೆಟ್ಟು, ಸೋಮೇಶ್ವರ ಉಚ್ಚಿಲ ಬೋವಿ, ತಲಪಾಡಿ ಫಲಾಹ್ ಶಾಲೆ, ಗಂಜಿಮಠ ಗ್ರಾಮದ ಮುಳ್ಳುಗುಡ್ಡೆ, ಪಾವೂರು ಗ್ರಾಮದ ಅಕ್ಷರ ನಗರ ಕೇಂದ್ರಕ್ಕೆ ಸಹಾಯಕಿಯರ ಹುದ್ದೆಗೆ 4ರಿಂದ 9ನೆ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಫೆ.4ರೊಳಗೆ ಅರ್ಜಿ ಸಲ್ಲಿಸಬಹುದು.
ಎಲ್ಲ ಹುದ್ದೆಗಳು ಸಾಮಾನ್ಯ ವರ್ಗವಾಗಿದ್ದು, ಮಾಹಿತಿಗಾಗಿ ದೂ.0824-2263199 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





