ಸೋತ ಅಭ್ಯರ್ಥಿಗೆ ಗೆದ್ದ ಅಭ್ಯರ್ಥಿಯಿಂದ ಹಲ್ಲೆ: ಆರೋಪ
ಎಪಿಎಂಸಿ ಚುನಾವಣಾ ವಿಜಯೋತ್ಸವ
ಮೂಡುಬಿದಿರೆ, ಜ.14: ಎಪಿಎಂಸಿ ಚುನಾವಣೆಯ ವಿಜಯೋತ್ಸವ ವೇಳೆ ಕಲಹ ನಡೆದಿದ್ದು, ಸೋತ ಅಭ್ಯರ್ಥಿಗೆ ಗೆದ್ದ ಅಭ್ಯರ್ಥಿ ಹಲ್ಲೆ ನಡೆಸಿರುವುದಾಗಿ ಪೊಲೀಸ್ ದೂರು ದಾಖಲಾದ ಘಟನೆ ಹೊಸಬೆಟ್ಟು ಗ್ರಾಮದ ಮಾಸ್ತಿಕಟ್ಟೆ ಎಂಬಲ್ಲಿ ಶನಿವಾರ ನಡೆದಿದೆ.
ಕಲ್ಲಮುಂಡ್ಕೂರು ಎಪಿಎಂಸಿ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಚಂದ್ರಹಾಸ ಸನಿಲ್, ಬಿಜೆಪಿಯಿಂದ ವಲೇರಿಯನ್ ಕುಟಿನ್ನೊ ಮತ್ತು ಜೆಡಿಯಸ್‌ನಿಂದ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಸಿದ್ದರು. ಮತ ಎಣಿಕೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚಂದ್ರಹಾಸ ಸನಿಲ್ ಅಕ ಮತಗಳಿಂದ ಜಯಭೆೇರಿ ಗಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸನಿಲ್ ಪರ ವಿಜಯೋತ್ಸವ ಆಚರಣೆ ನಡೆಸಿದ್ದು, ಪಟಾಕಿ ಸಿಡಿಸಿ ಜಯಘೋಷ ಹಾಕುತ್ತಾ ಇದ್ದ ಸಂದಭರ್ ಹೊಸಬೆಟ್ಟು ಎಂಬಲ್ಲಿ ಪರಾಜಿತ ಅಭ್ಯರ್ಥಿ ವರೀಯನ್ ವಿಜಯೋತ್ಸವಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರು ವಲೇರಿಯನ್‌ನ್ನು ಪ್ರಶ್ನಿಸಿದ್ದು, ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಿದ್ದರೆನ್ನಲಾಗಿದೆ.
ವಲೇರಿಯನ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ನೀಡಿದ ದೂರಿನನ್ವಯ ಮೂಡುಬಿದಿರೆ ಪೊಲೀಸರು ಚಂದ್ರಹಾಸ ಸನಿಲ್, ಜಯರಾಮ ಬಂಗೇರಾ, ಸಂತೋಷ್ ಶೆಟ್ಟಿ, ಚೇತನ್, ದೀಪಕ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.







