ಪ್ರೇಯಸಿಯ ಎದುರಲ್ಲೇ ಯುವಕ ಆತ್ಮಹತ್ಯೆ
ಹಿರಿಯಡ್ಕ, ಜ.14: ಮದುವೆ ವಿಚಾರದಲ್ಲಿ ಕೋಪಗೊಂಡ ಯುವಕನೋರ್ವ ತನ್ನ ಪ್ರೇಯಸಿಯ ಎದುರಲ್ಲೇ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆತ್ರಾಡಿಯ ಕುಮೇರಿ ಎಂಬಲ್ಲಿರುವ ಹಾಡಿಯಲ್ಲಿ ಇಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಆತ್ರಾಡಿಯ ಪ್ರಕಾಶ್ ಶೆಟ್ಟಿ(19) ಎಂದು ಗುರುತಿಸಲಾಗಿದೆ. ಕೇಬಲ್ ಕೆಲಸ ಮಾಡುತ್ತಿದ್ದ ಈತ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದು, ಇಂದು ಹಾಡಿಯೊಂದರಲ್ಲಿ ಮದುವೆಯಾಗುವ ವಿಚಾರದಲ್ಲಿ ಆಕೆಯೊಂದಿಗೆ ಮಾತನಾಡುತ್ತಾ ಸಿಟ್ಟುಗೊಂಡು ಆಕೆಯ ಚೂಡಿದಾರದ ಶಾಲನ್ನು ಮರಕ್ಕೆ ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





