ಸಾಲದ ಬಾಬ್ತು ನೀಡಿದ ಚೆಕ್ ಅಮಾನ್ಯ: ದಂಡ ನೀಡಲು ನ್ಯಾಯಾಲಯ ಆದೇಶ
ಪುತ್ತೂರು, ಜ.14: ಸಾಲ ಪಡೆದುಕೊಂಡಿದ್ದ ಹಣದ ಮರುಪಾವತಿಗಾಗಿ ನೀಡಲಾಗಿದ್ದ ಚೆಕ್ ಅಮಾನ್ಯಗೊಂಡಿದ್ದ ಪ್ರಕರಣವೊಂದಕ್ಕೆ ಸಂಬಂಸಿದ ಆರೋಪಿಗೆ ಪುತ್ತೂರು ನ್ಯಾಯಾಲಯವು ದಂಡ ವಿಸಿದ ಘಟನೆ ವರದಿಯಾಗಿದೆ.
ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಶಕ್ತಿನಗರ ನಿವಾಸಿ ಮೀನಾಕ್ಷಿ ಎಂಬವರು ದಂಡನೆಗೊಳಗಾದವರು. ಮೀನಾಕ್ಷಿ ಉಪ್ಪಿನಂಗಡಿಯ ದೊಡ್ಡಣ್ಣ ಶೆಟ್ಟಿ ಎಂಬವರಿಂದ 1 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಸಾಲದ ಹಣ ಮರುಪಾವತಿಗಾಗಿ ಮೀನಾಕ್ಷಿ ಅವರು ನೀಡಿದ್ದ ಚೆಕ್ ಅಮಾನ್ಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ದೊಡ್ಡಣ್ಣ ಶೆಟ್ಟಿ ಅವರು ಮೀನಾಕ್ಷಿ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರೆನ್ನಲಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎ್ಸಿ ನ್ಯಾಯಾಲಯದ ನ್ಯಾಯಾೀಶ ವಿಜಯ್ ಅವರು ಆರೋಪಿಯು 1.1 ಲಕ್ಷ ರೂ. ದಂಡ ಪಾವತಿಸಬೇಕು. ತಪ್ಪಿದಲ್ಲಿ 6 ತಿಂಗಳ ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದ್ದಾರೆ. ಈ ಹಣದಲ್ಲಿ 10 ಸಾವಿರ ರೂ. ಯನ್ನು ಸರಕಾರಕ್ಕೆ ಹಾಗೂ 1 ಲಕ್ಷ ರೂ. ಯನ್ನು ಫಿರ್ಯಾದಿ ದೊಡ್ಡಣ್ಣ ಅವರಿಗೆ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಫಿರ್ಯಾದಿ ದೊಡ್ಡಣ್ಣ ಅವರ ಪರವಾಗಿ ವಕೀಲ ಮಹೇಶ್ ಕಜೆ ವಾದಿಸಿದ್ದರು.





