ಬೈಕ್ ಅಪಘಾತ: ಪತ್ರಕರ್ತನಿಗೆ ಗಾಯ
ಸುಳ್ಯ, ಜ.14: ಸುಳ್ಯ ಮೊಗರ್ಪಣೆ ಸಮೀಪ ಬೈಕ್-ಸ್ಕೂಟರ್ ಢಿಕ್ಕಿ ಹೊಡೆದು ಇಬ್ಬರು ಗಾಯಗೊಂಡ ಘಟನೆ ವರದಿಯಾಗಿದೆ.
ಪತ್ರಕರ್ತ ದಿನೇಶ್ ಮಠ, ಆಕಾಶ್ ಗಾಯಗೊಂಡವರು. ದಿನೇಶ್ ಮಠ ತನ್ನ ಬೈಕ್‌ನಲ್ಲಿ ಸುಳ್ಯದಿಂದ ಕನಕಮಜಲಿನ ತನ್ನ ಮನೆಗೆ ಹೋಗುತ್ತಿದ್ದಾಗ ಅವರ ಬೈಕ್ ಮತ್ತು ಅಪೋಲೊ ಟಯರ್ಸ್‌ನ ಉದ್ಯೋಗಿ ಆಕಾಶ್ ಎಂಬವರ ಸ್ಕೂಟರ್ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಈ ಸಂದರ್ಭ ರಸ್ತೆಯಲ್ಲಿ ಬಿದ್ದಿದ್ದ ಇಬ್ಬರನ್ನು ತಕ್ಷಣ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ದಿನೇಶ್ ಮಠ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
Next Story





