ಆಮಿರ್ ಖಾನ್, ಆಲಿಯಾ ಭಟ್‌ಗೆ ಫಿಲ್ಮ್‌ಫೇರ್ ಪ್ರಶಸ್ತಿ

ಮುಂಬೈ,ಜ.15: ಆಮಿರ್‌ಖಾನ್‌ಗೆ ಅತ್ಯುತ್ತಮ ನಟ ಗೌರವ; ಬಿಹಾರಿ ವಲಸೆ ಮಹಿಳೆಯಾಗಿ ಉಡ್ತಾಪಂಜಾಬ್‌ನಲ್ಲಿ ಅದ್ಭುತ ಪ್ರತಿಭೆ ಮೆರೆದ ಆಲಿಯಾ ಭಟ್‌ಗೆ ಅತ್ಯುತ್ತಮ ನಟಿ ಹೆಗ್ಗಳಿಕೆ; . ಬಾಲಿವುಡ್ ತಾರೆಗಳ ಸಂಗಮದಲ್ಲಿ ಮಿಂದೆದ್ದ ಚಿತ್ರಪ್ರೇಮಿಗಳು; ಇಲ್ಲಿನ ವರ್ಲಿ ಎನ್‌ಎಸ್‌ಸಿಐ ಡೋಮ್‌ನಲ್ಲಿ ನಡೆದ 62ನೆ ಜಿಯೊ-ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭದ ಹೈಲೈಟ್ಸ್ ಇವು.
ಅತ್ಯುತ್ತಮ ಚಿತ್ರ ಪ್ರಶಸ್ತಿ ದಂಗಲ್ ಪಾಲಾಗಿದ್ದರೆ, ನಿತೇಶ್ ತಿವಾರಿ ಉತ್ತಮ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಸೋನಮ್ ಕಪೂರ್ ವಿಮರ್ಶಕರ ಆಯ್ಕೆಯ ಉತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ನೀರ್ಜಾ ಚಿತ್ರದ ನೀರ್ಜಾ ಭಾನೋಟ್ ಪಾತ್ರಕ್ಕಾಗಿ ಈ ಗೌರವ ಪ್ರಾಪ್ತವಾಗಿದೆ. ಶಾಹಿದ್ ಕಪೂರ್ ಹಾಗೂ ಮನೋಜ್ ಬಾಜಪೇಯಿ ವಿಮರ್ಶಕರ ಆಯ್ಕೆಯ ಉತ್ತಮ ನಟರಾಗಿದ್ದು, ಕ್ರಮವಾಗಿ ಉಡ್ತಾಪಂಜಾಬ್ ಹಾಗೂ ಆಲಿಘಡ್ ಚಿತ್ರದ ನಟನೆಗಾಗಿ ಗೌರವ ಸಂದಿದೆ. ನೀರ್ಜಾ ಹಾಗೂ ಕಪೂರ್ ಆಂಡ್ ಸನ್ಸ್ ಚಿತ್ರ ತಲಾ ಐದು ಪ್ರಶಸ್ತಿ ಗೆದ್ದಿವೆ. ಫಿಲಂಫೇರ್ ಜೀವಮಾನದ ಸಾಧನೆ ಪ್ರಶಸ್ತಿ ಶತ್ರುಘ್ನ ಸಿನ್ಹಾ ಪಾಲಾಗಿದೆ. ಉಳಿದಂತೆ ಪ್ರಶಸ್ತಿ ವಿಜೇತರ ವಿವರ ಹೀಗಿದೆ.
ಕಿರುಚಿತ್ರದ ಅತ್ಯುತ್ತಮ ನಟ- ಮನೋಜ್ ಬಾಜಪೇಯಿ (ತಾನ್‌ದೇವ್)
ಜನರ ಆಯ್ಕೆಯ ಅತ್ಯುತ್ತಮ ಕಿರುಚಿತ್ರ: ಖಮಾಖಾ
ಉತ್ತಮ ಕಿರುಚಿತ್ರ: ಚುಟ್ನಿ
ಉತ್ತಮ ಕಿರುಚಿತ್ರ (ನಾನ್ ಫಿಕ್ಷನ್): ಮೈಥಿಲಿ ಕುಸ್ತಿ
ಕಿರುಚಿತ್ರದ ಅತ್ಯುತ್ತಮ ನಟಿ: ತಿಸ್ಕಾ ಛೋಪ್ರಾ (ಚುಟ್ನಿ)
ಉತ್ತಮ ಚೊಚ್ಚಲ ಚಿತ್ರನಿರ್ದೇಶಕ: ಅಶ್ವಿನಿ ಅಯ್ಯರ್ ತಿವಾರಿ (ನೀಲ್ ಬಟ್ಟಿ ಸನ್ನತಾ)
ಉತ್ತಮ ಚೊಚ್ಚಲ ನಟ: ದಿಜಿತ್ ದೋಸಂಜ್ (ಉಡ್ತಾಪಂಜಾಬ್)
ಉತ್ತಮ ಚೊಚ್ಚಲ ನಟಿ: ರಿತಿಕಾ ಸಿಂಗ್ (ಸಾಲಾ ಖಡೂಸ್)
ಉತ್ತಮ ಸಂಭಾಷಣೆ: ರಿತೇಶ್ ಶಾ (ಪಿಂಕ್)
ಉತ್ತಮ ಚಿತ್ರಕಥೆ: ಶಕುನ್ ಬಾತ್ರಾ ಹಾಗೂ ಅನೇಶಾ ದೆವಿತ್ರೆ ಧಿಲಾನ್ (ಕಪೂರ್ ಅಂಡ್ ಸನ್ಸ್)
ಉತ್ತಮ ಕಥೆ: ಶಕುನ್ ಬಾತ್ರಾ ಹಾಗೂ ಅನೇಶಾ ದೆವಿತ್ರೆ ಧಿಲಾನ್ (ಕಪೂರ್ ಆಂಡ್ ಸನ್ಸ್)
ಉತ್ತಮ ಪೋಷಕ ನಟ: ರಿಷಿ ಕಪೂರ್ (ಕಪೂರ್ ಅಂಡ್ ಸನ್ಸ್)
ಉತ್ತಮ ಪೋಷಕ ನಟಿ: ಶಬಾನಾ ಆಝ್ಮಿ (ನೀರ್ಜಾ)
ಉತ್ತಮ ಮ್ಯೂಸಿಕ್ ಆಲ್ಬಂ: ಪ್ರೀತಂ (ಏ ದಿಲ್ ಹೈ ಮುಷ್ಕಿಲ್)
ಉತ್ತಮ ಗೀತರಚನೆ: ಅಮಿತಾಬ್ ಭಟ್ಟಾಚಾರ್ಯ (ಚನ್ನಾ ಮೆರೆಯಾ, ಏ ದಿಲ್ ಹೈ ಮುಷ್ಕಿಲ್ ಚಿತ್ರ)
ಉತ್ತಮ ಗಾಯಕ: ಅರ್ಜಿತ್ ಸಿಂಗ್ (ಏ ದಿಲ್ ಹೈ ಮುಷ್ಕಿಲ್)
ಉತ್ತಮ ಗಾಯಕಿ: ನೇಹಾ ಭಾಸಿನ್ (ಸುಲ್ತಾನ್ ಚಿತ್ರದ ಜಗ್ ಘೂಮೆಯಾ)
ಆರ್‌ಡಿ ಬರ್ಮನ್ ಯುವ ಸಂಗೀತ ಪ್ರತಿಭೆ: ಅಮಿತ್ ಮಿಶ್ರಾ
ಉತ್ತಮ ವಿಶುವಲ್ ಎಫೆಕ್ಟ್: ರೆಡ್ ಚಿಲ್ಲೀಸ್ (ಫ್ಯಾನ್)
ಉತ್ತಮ ಸಂಕಲನ: ಮೊನಿಶಾ ಬಲ್ದಾವ (ನೀರ್ಜಾ)
ಉತ್ತಮ ಪ್ರಸಾದನ: ಪಾಯಲ್ ಸಲೂಜಾ (ಉಡ್ತಾ ಪಂಜಾಬ್)
ಉತ್ತಮ ಸಾಹಸ: ಶ್ಯಾಮ್ ಕೌಶಲ್ (ದಂಗಲ್)







