ಹಿಮಾಚಲ ಪ್ರದೇಶ: 58 ಮನೆಗಳು ಭಸ್ಮ

ಶಿಮ್ಲಾ, ಜ.15: ಇಲ್ಲಿಯ ರೋಹ್ರೂ ಪ್ರದೇಶದ ತಂಗ್ನು ಗ್ರಾಮದಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಭಾರೀ ಅಗ್ನಿ ಅನಾಹುತದಲ್ಲಿ 58 ಮನೆಗಳು ಸುಟ್ಟು ಭಸ್ಮವಾಗಿದ್ದು, ಸುಮಾರು 216 ಜನರು ನಿರ್ಗತಿಕರಾಗಿದ್ದಾರೆ. ಮಾನವ ಜೀವಕ್ಕೆ ಯಾವುದೇ ಹಾನಿಯಾಗಿಲ್ಲವಾದರೂ, 12ಕ್ಕೂ ಅಧಿಕ ಜಾನುವಾರುಗಳು ಸಾವನ್ನಪ್ಪಿವೆ.
ನಿಖರವಾಗಿ ಎಷ್ಟು ನಷ್ಟ ಸಂಭವಿಸಿದೆ ಎನ್ನುವುದನ್ನು ಇನ್ನಷ್ಟೇ ಲೆಕ್ಕ ಹಾಕಬೇಕಾ ಗಿದೆಯಾದರೂ ಕೋಟ್ಯಂತರ ರೂ.ಗಳ ಹಾನಿಯುಂಟಾಗಿರುವ ಸಾಧ್ಯತೆಯಿದೆ ಎಂದು ಎಸ್‌ಪಿ ಡಿ.ಡಬ್ಲೂ.ನೇಗಿ ಅವರು ತಿಳಿಸಿದರು.
ಸಂತ್ರಸ್ತ ಕುಟುಂಬಗಳಿಗೆ ತಲಾ 40,000 ರೂ.ಗಳನ್ನು ತಕ್ಷಣದ ಪರಿಹಾರವಾಗಿ ಒದಗಿಸಲಾಗಿದೆ ಎಂದರು.
ಬೆಂಕಿಗೆ ಕಾರಣವೇನು ಎನ್ನುವುದು ಸ್ಪಷ್ಟವಾಗಿಲ್ಲ, ಆದರೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದೆಂದು ಶಂಕಿಸಲಾಗಿದೆ ಎಂದು ಅವರು ತಿಳಿಸಿದರು.
Next Story





