ನೀಲಾವರದಲ್ಲಿ ಕಾಮಧೇನು ಗೋಶಾಲೆ

ಬ್ರಹ್ಮಾವರ, ಜ.15: ಉಡುಪಿ ಪೇಜಾವರ ಮಠದ ಗೋವರ್ಧನ ಗಿರಿ ಟ್ರಸ್ಟ್‌ನಿಂದ ನಡೆಯುತ್ತಿರುವ ನೀಲಾವರ ಗೋಶಾಲೆಯಲ್ಲಿ ನೂತನವಾದ ಕಾಮಧೇನು ಗೋಶಾಲೆ ಮತ್ತು ಗೋಧೂಳಿ ಸಭಾಗೃಹವನ್ನು ಭಾವಿ ಪರ್ಯಾಯ ಪೀಠಾಧೀಶ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ಟ್ರಸ್ಟ್‌ನ ಅಧ್ಯಕ್ಷ, ಪೇಜಾವರ ಕಿರಿಯ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಕೃಷ್ಣನು ಗೋಪಾಲಕರೊಂದಿಗೆ ಗೋಸೇವೆ ಮಾಡಿ ದಂತೆ ನಾವೆಲ್ಲರೂ ಸೇರಿ ಗೋಸೇವೆ ಮಾಡಬೇಕು. ಗೋವಿನ ಹಾಲು, ಮೊಸರು, ಬೆಣ್ಣೆ, ತುಪ್ಪ, ಗೋಮೂತ್ರ ಗೋಮಯ ಸೇವನೆ ಮಾಡಿದರೆ ಆರೋಗ್ಯಕ್ಕೆ ಉತ್ತಮ. ಗೋಶಾಲೆಯಲ್ಲಿ ಪ್ರತಿ ತಿಂಗಳಿಗೆ ಸುಮಾರು 13 ಲಕ್ಷ ರೂ. ಖರ್ಚು ಆಗುತ್ತದೆ ಎಂದರು.
ಅದಮಾರು ಕಿರಿಯ ಮಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಇಸ್ಕೊನ್ ಸಂಸ್ಥೆಯ ಮುಖ್ಯಸ್ಥ ಕಾರುಣ್ಯ ಪಂಡಿತ್ ದಾಸ್, ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶ ಜಯರಾಮ ಭಟ್ ಉಪಸ್ಥಿತರಿದ್ದರು.
Next Story





