ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನಿರ್ದೇಶಕ ಮಂಡಳಿ ಸದಸ್ಯರಾಗಿ ಸಿ.ಎಚ್ ಕುಞ೦ಬು ಆಯ್ಕೆ

ಕಾಸರಗೋಡು,ಜ : ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನಿರ್ದೇಶಕ ಮಂಡಳಿ ಸದಸ್ಯರಾಗಿ ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಮಾಜಿ ಶಾಸಕ ಸಿ.ಎಚ್ ಕುಞ೦ಬು ರವರನ್ನು ಆಯ್ಕೆ ಮಾಡಲಾಗಿದೆ.
ಮಾಜಿ ಸ್ಪೀಕರ್ ಎಂ . ವಿಜಯಕುಮಾರ್ ನಿಗಮದ ಅಧ್ಯಕ್ಷರಾಗಿದ್ದು, ನಿರ್ದೇಶಕ ಮಂಡಳಿಯಲ್ಲಿ ಐವರು ಸದಸ್ಯರಿದ್ದಾರೆ.
ಕಣ್ಣೂರು , ಕೋಝಿಕ್ಕೋಡು ವಿಶ್ವ ವಿದ್ಯಾನಿಲಯಗಳ ಸೆನೆಟ್ ಸದಸ್ಯರಾಗಿದ್ದ ಕುಞ೦ಬು, ಬಳಿಕ ರಾಜಕೀಯದಲ್ಲಿ ಸಕ್ರಿಯರಾದರು. ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಅಲ್ಲದೆ ಕೇರಳ ಕೃಷಿಕ ಸಂಘ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ 2006 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು
Next Story





