21 ವರ್ಷಗಳ ನಂತರ ಎನ್ಡಿಟಿವಿ ತೊರೆದ ಬರ್ಖಾ ದತ್
ಹೊಸದಿಲ್ಲಿ,ಜ.15: ಹಿರಿಯ ಪತ್ರಕರ್ತೆ, ಎನ್ಡಿಟಿವಿಯ ಸಲಹಾ ಸಂಪಾದಕಿ ಬರ್ಖಾ ದತ್ ಅವರು 21 ವರ್ಷಗಳ ಸೇವೆಯ ಬಳಿಕ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ದತ್ ತನ್ನದೇ ಆದ ಉದ್ಯಮವೊಂದನ್ನು ಆರಂಭಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದವು. ವಾಹಿನಿಯೊಂದಿಗೆ ಸುದೀರ್ಘ ಅವಧಿಗೆ ಕಾರ್ಯ ನಿರ್ವಹಿಸಿದ್ದಕ್ಕಾಗಿ ದತ್ ಅವರನ್ನು ಪ್ರಶಂಸಿಸಿರುವ ಎನ್ಡಿಟಿವಿಯು, ಅವರ ಉತ್ತಮ ಭವಿಷ್ಯಕ್ಕಾಗಿ ಶುಭಾಶಯಗಳನ್ನು ಕೋರಿದೆ.
1995ರಲ್ಲಿ ಆಗಷ್ಟೇ ಕಾಲೇಜು ಮುಗಿಸಿದ್ದ ದತ್ ನೇರವಾಗಿ ಎನ್ಡಿಟಿವಿ ವಾಹಿನಿಗೆ ಸೇರಿದ್ದರು.
1999ರಲ್ಲಿ ಕಾರ್ಗಿಲ್ ಯುದ್ಧ ಕುರಿತ ತನ್ನ ನಿರ್ಭೀತ ವರದಿಗಾರಿಕೆಯಿಂದಾಗಿ ಪತ್ರಿಕೋದ್ಯಮದಲ್ಲಿ ಮಿನುಗು ತಾರೆಯಾಗಿ ಮೂಡಿಬಂದಿದ್ದ ದತ್ ಪದ್ಮಶ್ರೀ ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಆದರೆ ವಿವಾದಾತ್ಮಕ ರಾಡಿಯಾ ಟೇಪ್ಗಳಲ್ಲಿ ದತ್ ಪಾತ್ರವಿರುವ ಬಗ್ಗೆಯೂ ಕೇಳಿಬಂದ ನಂತರ ಎನ್ಡಿವಿಯಲ್ಲಿ ಅವರ ಸೇವಾವಧಿ ಕೂಡ ವಿವಾದದ ಸುಳಿಯಲ್ಲಿ ಸಿಲುಕಿತ್ತು.
Next Story