ಮೆದುಳು ಜ್ವರಕ್ಕೆ ವಿದ್ಯಾರ್ಥಿ ಬಲಿ

ಕಡಬ, ಜ. 15: ಇಲ್ಲಿನ ಸೈಂಟ್ ಜೋಕಿಮ್ಸ್ ಪ.ಪೂ.ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ, ಮರ್ದಾಳದ 102ನೇ ನೆಕ್ಕಿಲಾಡಿ ಗ್ರಾಮದ ಕರ್ಮಾಯಿ ನಿವಾಸಿ ಹಂಝ ಕೆ. ಅವರ ಪುತ್ರ ಮುಹಮ್ಮದ್ ತೌಸೀಫ್ (16) ಮೆದುಳು ಜ್ವರದ ಕಾರಣದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ಮೃತಪಟ್ಟಿದ್ದಾನೆ.
ಜ್ವರ ಹಾಗೂ ತಲೆನೋವಿಗಾಗಿ ಕಡಬದ ಖಾಸಗಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆಗಾಗಿ ಬಂದಿದ್ದ ಆತನನ್ನು ಮೆದುಳು ಜ್ವರದ ಶಂಕೆಯ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 10 ದಿನಗಳಿಂದ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತ ಚಿಕಿತ್ಸೆ ಫಲಕಾರಿಯಾಗಿದೆ ರವಿವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ಮೃತ ವಿದ್ಯಾರ್ಥಿ ತಂದೆ, ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾನೆ. ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಮುಹಮ್ಮದ್ ತೌಸೀಫ್ ನ ಮನೆಯವರಿಗೆ ಆತನ ಚಿಕಿತ್ಸೆಗಾಗಿ ನೆರವಾಗಲು ಆತ ಕಲಿಯುತ್ತಿದ್ದ ಕಾಲೇಜಿನ ವಿದ್ಯಾರ್ಥಿಗಳು ನಿಧಿ ಸಂಗ್ರಹಿಸಿ ನೆರವು ನೀಡಿದ್ದರು. ಮರ್ದಾಳದ ಯುವಕರು ಸೇರಿಕೊಂಡು ಮರ್ದಾಳ ಹಾಗೂ ಕಡಬ ಪೇಟೆಯಲ್ಲಿ ಧನಸಂಗ್ರಹ ನಡೆಸಿ ಆಸ್ಪತ್ರೆಯ ಬಿಲ್ ಪಾವತಿಸಲು ಸಹಕರಿಸಿದ್ದರು.





