ಭಟ್ಕಳ: ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ - ದಿನಾಂಕ ವಿಸ್ತರಣೆ
ಭಟ್ಕಳ,ಜ.15: ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಭಟ್ಕಳ ಶಾಖೆಯು ಆಯೋಜಿಸಿದ್ದ ಜಿಲ್ಲಾ ಮಟ್ಟದ ಸೀರತ್ ಪ್ರಬಂಧ ಸ್ಪರ್ಧೆಯ ದಿನಾಂಕ ವಿಸ್ತರಣೆಗೊಂಡಿದ್ದು ಪ್ರಬಂಧ ಕಳುಹಿಸಲು ಜ.15ರ ಬದಲು ಜ.30 ಅಂತಿಮ ದಿನವಾಗಿದೆ ಎಂದು ಪ್ರಬಂಧ ಸಂಚಾಲಕ ಎಂ.ಆರ್.ಮಾನ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳ ಸಂವರ್ಧನೆಯಲ್ಲಿ ಪ್ರವಾದಿ ಮುಹಮ್ಮದ್ ಪೈಬಂಗರರ ಬೋಧನೆ ಪ್ರಸ್ತುತವೇಎಂಬ ವಿಷಯದಲ್ಲಿ ಉತ್ತರಕನ್ನಡ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಪ್ರಬಂಧ ಬರೆಯಬಹುದಾಗಿದ್ದು ಜ.30 ಕೊನೆಯ ದಿನಾಂಕವಾಗಿರುತ್ತದೆ.
ಆಸಕ್ತ ಶಿಕ್ಷಕರು ತಮ್ಮ ಪ್ರಬಂಧಗಳನ್ನು ಎಂ.ಆರ್.ಮಾನ್ವಿ ಸಂಚಾಲಕರು ಜಿಲ್ಲಾಮಟ್ಟದ ಸೀರತ್ ಪ್ರಬಂಧ ಸ್ಪರ್ಧೆ ಸುಲ್ತಾನ್ ಸ್ಟ್ರೀಟ್ ದಾವತ್ ಸೆಂಟರ್ ಈ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9886455416 ಗೆ ಸಂಪರ್ಕಿಸಲು ತಿಳಿಸಿದೆ.
Next Story





