ವಿರಾಟ್ ಕೊಹ್ಲಿ ಶತಕ

ಪುಣೆ, ಜ.15: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಶತಕ ದಾಖಲಿಸಿದ್ದಾರೆ.
ವಿರಾಟ್ ಕೊಹ್ಲಿ 177ನೆ ಏಕದಿನ ಪಂದ್ಯದಲ್ಲಿ 27ನೆ ಶತಕ ದಾಖಲಿಸಿದ್ದಾರೆ. 351 ರನ್ ಗಳ ಸವಾಲನ್ನು ಪಡೆದ ಭಾರತ 11.5 ಓವರ್ ಗಳಲ್ಲಿ 63ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಆಸರೆ ನೀಡಿದ ಕೊಹ್ಲಿ ಮತ್ತು ಆಲ್ ರೌಂಡರ್ ಕೇದಾರ್ ಜಾಧವ್ ಜೊತೆಯಾಟದಲ್ಲಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ.
35 ಓವರ್ ಗಳ ಮುಕ್ತಾಯಕ್ಕೆ ಭಾರತ 4 ವಿಕೆಟ್ ನಷ್ಟದಲ್ಲಿ 251ರನ್ ಗಳಿಸಿದೆ. ಕೊಹ್ಲಿ ಔಟಾಗದೆ 117 ಮತ್ತು ಜಾಧವ್ 95 ರನ್ ಗಳಿಸಿ ಆಡುತ್ತಿದ್ದಾರೆ. ಗೆಲುವಿಗೆ ಭಾರತ 15 ಓವರ್ ಗಳಲ್ಲಿ 100 ರನ್ ಗಳಿಸಬೇಕಾಗಿದೆ.
Next Story





