Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಶ್ರದ್ಧಾ ಕೇಂದ್ರಗಳ ಸ್ವಚ್ಛತೆಗೆ ಕರೆ -...

ಶ್ರದ್ಧಾ ಕೇಂದ್ರಗಳ ಸ್ವಚ್ಛತೆಗೆ ಕರೆ - ಅಭೂತಪೂರ್ವ ಸ್ಪಂದನ

ವಾರ್ತಾಭಾರತಿವಾರ್ತಾಭಾರತಿ15 Jan 2017 11:14 PM IST
share
ಶ್ರದ್ಧಾ ಕೇಂದ್ರಗಳ ಸ್ವಚ್ಛತೆಗೆ ಕರೆ - ಅಭೂತಪೂರ್ವ ಸ್ಪಂದನ

ಬೆಳ್ತಂಗಡಿ,ಜ.15: ಸಂಕ್ರಾತಿಯೊಳಗಾಗಿ ಎಲ್ಲ ಶ್ರದ್ಧಾ ಕೇಂದ್ರಗಳನ್ನು ಸ್ವಚ್ಛಗೊಳಿಸಬೇಕೆಂಬ ಧರ್ಮಸ್ಥಳ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರ ಕರೆಗೆ ರಾಜ್ಯದಾದ್ಯಂತ ಅಭೂತಪೂರ್ವ ಸ್ಪಂದನ ದೊರಕಿದೆ. ಈ ಕುರಿತು ವಿವರಗಳನ್ನು  ಪ್ರಕಟಿಸಿರುವ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್. ಎಚ್. ಮಂಜುನಾಥ್‌ರವರು ಸಾಧಿಸಿದ ಪ್ರಗತಿಯ ವಿವರಗಳನ್ನು ನೀಡಿದರು.

ರಾಜ್ಯದ ಎಲ್ಲ ಸ್ವಸಹಾಯ ಸಂಘಗಳ ಸದಸ್ಯರು, ಯೋಜನೆಯ ಕಾರ್ಯಕರ್ತರು, ಮಠಾಧೀಶರುಗಳು, ಸಂಘ ಸಂಸ್ಥೆಗಳು, ಕೈಜೋಡಿಸಬೇಕೆಂದು ಅವರು ವಿನಂತಿಸಿದ್ದರು. ಒಂದು ತಿಂಗಳ ಕಾಲ ಅವಿರತವಾಗಿ ನಡೆದ ಈ ಅಭಿಯಾನದಲ್ಲಿ 7,19,000 ಜನರು ಸ್ವಯಂ ಪ್ರೇರಿತರಾಗಿ ಶ್ರದ್ಧಾ ಕೇಂದ್ರಗಳನ್ನು ಸ್ವಚ್ಛಗೊಳಿಸುವಲ್ಲಿ ತೊಡಗಿರುತ್ತಾರೆ. ಖುದ್ದು ವೀರೇಂದ್ರ ಹೆಗ್ಗಡೆಯವರು ರಾಜ್ಯದ ಹಲವಾರು ಕೇಂದ್ರಗಳಿಗೆ ಭೇಟಿ ನೀಡಿ ಗಣ್ಯ ಮಾನ್ಯರನ್ನು ಸಂಪರ್ಕಿಸಿ ಪ್ರೇರಣೆಯನ್ನು ನೀಡಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಠಾಧಿಪತಿಗಳು, ಮುಸ್ಲಿಯಾರುರವರು, ಚರ್ಚಿನ ಗುರುಗಳು ತಮ್ಮ ಕ್ಷೇತ್ರವನ್ನು ಸ್ವಚ್ಛಗೊಳಿಸುವಲ್ಲಿ ಮುಂದಾಳತ್ವವನ್ನು ವಹಿಸಿಕೊಂಡರು. ಮಠಾಧೀಶರುಗಳು ಸ್ವಯಂ ಸ್ವಚ್ಛತೆಗಾಗಿ ದುಡಿದದ್ದು ವಿಶೇವಾಗಿತ್ತು. ಜನವರಿ 13 ರಂದು ಸಂಕ್ರಾತಿಯ ಮುನ್ನಾದಿನ ರಾಜ್ಯದಾದ್ಯಂತ 5 ಲಕ್ಷಕ್ಕೂ ಮಿಕ್ಕಿದ ಜನರು ಏಕಕಾಲದಲ್ಲಿ ಸಹಸ್ರ ಸಂಖ್ಯೆಯ ದೇವಸ್ಥಾನಗಳನ್ನು ಶುದ್ಧಿಗೊಳಿಸಿದರು.ಇದಕ್ಕಾಗಿ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಕಾರ್ಯಪಡೆಯೊಂದನ್ನು ರೂಪಿಸಿ ಸಮುದಾಯ ನಿರ್ದೇಶಕ ಶ್ರೀ ಜಯರಾಮ ನೆಲ್ಲಿತ್ತಾಯರವರಿಗೆ ಜವಾಬ್ಧಾರಿಯನ್ನು ನೀಡಲಾಗಿತ್ತು.

ಈ ಅಭಿಯಾನದಲ್ಲಿ 8,045 ಶ್ರದ್ಧಾ ಕೇಂದ್ರಗಳು ಸ್ವಚ್ಛಗೊಂಡಿದ್ದು, ಈ ಪೈಕಿ 200 ಕ್ಕೂ ಮಿಕ್ಕಿದ ಮಠ ಮತ್ತು ಗದ್ದುಗೆಗಳು, 65 ಜಿನಬಸದಿಗಳು, 12 ಮಸೀದಿಗಳು, 4 ಚರ್ಚುಗಳು ಸೇರಿವೆ. ಉಡುಪಿಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಪರ್ಯಾಯ ಪೇಜಾವರಶ್ರೀಗಳು, ಶಿರೂರು ಮತ್ತು ಕೃ್ಣಾಪುರ ಮಠಾಧೀಶರುಗಳು ಸ್ವಯಂ ಆಸಕ್ತಿಯಿಂದ ಪ್ರೇರಣೆಯನ್ನು ನೀಡಿದರು. ಉಳ್ಳಾಲ ದರ್ಗಾದ ಅಧ್ಯಕ್ಷರು ಪೂಜಾ ಸ್ಥಳವನ್ನು ಸ್ವಚ್ಛಗೊಳಿಸುವಲ್ಲಿ ಮಾರ್ಗದರ್ಶನವನ್ನು ನೀಡಿದರು. ಪ್ರಖ್ಯಾತ ಧಾರ್ಮಿಕ ಸ್ಥಳಗಳಾದ ಮೈಸೂರು ಚಾಮುಂಡೇಶ್ವರಿ ದೇವಸ್ಥಾನ, ಸುಬ್ರಹ್ಮಣ್ಯ ದೇವಸ್ಥಾನ, ಧರ್ಮಸ್ಥಳ, ಉಳ್ಳಾಲ ದರ್ಗಾ, ಹುಬ್ಬಳ್ಳಿ ಸಿದ್ಧಾರೂಢಾ ಮಠ, ಮುಂತಾದ ಪವಿತ್ರ ಸ್ಥಳಗಳನ್ನು ಶುದ್ಧೀಕರಿಸಲಾಯಿತು. ದಿನಾಂಕ 21 ರಂದು ಉಡುಪಿ ಕೃ್ಣಮಠ ಪರಿಸರವನ್ನು ಸ್ವಚ್ಛಗೊಳಿಸು ನಿರ್ಣಯವನ್ನೂ ಕೈಗೊಳ್ಳಲಾಗಿದೆ.

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಮುಂಚೂಣಿಯಲ್ಲಿದ್ದು, ಇಲ್ಲಿ 40,000 ಕ್ಕೂ ಮಿಕ್ಕಿದ ಭಕ್ತರು 580 ದೇವಸ್ಥಾನಗಳನ್ನು ಸ್ವಚ್ಛ ಮಾಡಿದ್ದು ಒಂದು ದಾಖಲೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 560, ಕೊಡಗು ಜಿಲ್ಲೆಯಲ್ಲಿ 486 ಕ್ಷೇತ್ರಗಳು ಸ್ವಚ್ಛಗೊಂಡವು.

ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಜ್ಯದ ಕಾನೂನು ಸಚಿವಜಯಚಂದ್ರರವರು, ಮೈಸೂರಿನ ಮಾಜಿ ಲೋಕಸಭಾ ಸದಸ್ಯವಿಶ್ವನಾಥ್‌ರವರು, ಸುಬ್ರಹ್ಮಣ್ಯಶ್ರೀಗಳು, ಒಡಿಯೂರು ಮತ್ತು ಮಾಣಿಲ ಸಂಸ್ಥಾನ ಮಠಾಧೀಶರುಗಳು, ತುಮಕೂರು ಸಿದ್ಧಗಂಗಾ ಮಠಾಧೀಶರು, ಬೆಂಗಳೂರಿನ ನಂಜಾವಧೂತ ಸ್ವಾಮೀಜಿಗಳು, ಜೇವರ್ಗಿಯ ಸಿದ್ಧಲಿಂಗ ಸ್ವಾಮಿಗಳು, ಬೀದರಿನ ಶಿವಶರಣಬಸಪ್ಪ ಸ್ವಾಮಿಗಳು, ಗದಗಿನ ತೋಂಟಾದಾರ್ಯ ಮಠಾಧೀಶರು, ಶಿರಹಟ್ಟಿ ಜಿಂಗಾಲೇಶ್ವರ ಸಂಸ್ಥಾನ ಮಠಾಧೀಶರು, ಕಾಸರಗೋಡಿನ ಕೊಂಡಿಯೂರು ಸಾ್ವಮಿಗಳು, ಮಾಜಿ ಮುಖ್ಯಮಂತ್ರಿಸದಾನಂದ ಗೌಡರವರು ಮುಂತಾದ ಸಾವಿರಾರು ಗಣ್ಯರು ಈ ಅಭಿಯಾನದಲ್ಲಿ ಸ್ವಯಂ ಪ್ರೇರಣೆಯಿಂದಮಾರ್ಗದರ್ಶನವನ್ನು ನೀಡಿದರು.

ಸಂಕ್ರಾಂತಿಯ ದಿನದಂದು ಸ್ವಚ್ಛತಾ ಆಂದೋಲನದ ಪ್ರಗತಿಯ ಪರಿಶೀಲನೆ ನಡೆಸಿದ ಧರ್ಮಾಧಿಕಾರಿಗಳು ಸ್ವಚ್ಛತಾ ಕಾರ್ಯಕ್ರಮವು ನಿರಂತರವಾಗಿ ಮುಂದುವರೆಯುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದು ಕಾರ್ಯಕರ್ತರಿಗೆ ಸೂಚಿಸಿದರು. ಮುಂದಿನ ತಿಂಗಳ 15 ರೊಳಗಾಗಿ ಧಾರ್ಮಿಕ ಕೇಂದ್ರಗಳ ಸ್ವಚ್ಛತೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಬಹುದೆಂದು ಅವರು ಅಭಿಪ್ರಾಯಪಟ್ಟರು. ಸಾಮಾನ್ಯ ಜನರು ಸ್ವಚ್ಛತೆಯ ಬಗ್ಗೆ ಆಸಕ್ತಿ ತೆಗೆದುಕೊಂಡರೆ ಮಾತ್ರ ಸ್ವಚ್ಛ ಭಾರತ್ ಕನಸು ನನಸಾಗಲು ಸಾಧ್ಯ. ಸಾಮಾನ್ಯರು ಮನಸ್ಸು ಮಾಡಿದರೆ ಸ್ವಚ್ಛತೆಯನ್ನು ಸರಳವಾಗಿ ಸಾಧಿಸಬಹುದೆಂದು ಅವರು ನುಡಿದರು. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಮುಂಬರುವ ದಿನಗಳಲ್ಲಿಯೂ ಜಾಗೃತಾಗಿರಬೇಕೆಂದು ಅವರು ಸೂಚಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X