ನಿಧಿ ಬಿಲ್ಡರ್ ಮತ್ತು ಡೆವಲಪರ್ಸ್ - ವೃಂದಾವನ ವಸತಿ ಸಮುಚ್ಛಯ ಉದ್ಘಾಟನೆ
ಪರಿಸರ ಸ್ನೇಹಿ ವಸತಿ ಸಮುಚ್ಛಯ ನಿರ್ಮಿಸಿ-ಬಿ.ರಮಾನಾಥ ರೈ

ಮಂಗಳೂರು,ಜ.15:ನಿಧಿ ಬಿಲ್ಡರ್ ಮತ್ತು ಡೆವಲಪರ್ಸ್ ಸಂಸ್ಥೆಯ ವತಿಯಿಂದ ನಗರದ ಮಣ್ಣಗುಡ್ಡೆ ಬಳಿ ನಿರ್ಮಿಸಲಾದ ವೃಂದಾವನ ವಸತಿ ಸಮುಚ್ಛವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ರವಿವಾರ ಉದ್ಘಾಟಿಸಿದರು.
ಸಮಾರಂಭವನ್ನುದ್ದೇಶಿಸಿ ಸಚಿವ ರಮಾನಾಥ ರೈ ಮಾತನಾಡುತ್ತಾ,ನಿಧಿ ಡೆವೆಲಪರ್ಸ್ ಸಂಸ್ಥೆಯ ವತಿಯಿಂದ ಉತ್ತಮ ಗುಣ ಮಟ್ಟದ ಹಾಗೂ ಆಕರ್ಷಕವಾದ ವಸತಿ ಸಮುಚ್ಛಯ ನಿರ್ಮಾಣಗೊಳ್ಳುವ ಮೂಲಕ ನಗರದ ಅಂದ ಇನ್ನಷ್ಟು ಹೆಚ್ಚಿದೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ವಸತಿ ಸಮುಚ್ಛಯದಿಂದ ಜನರಿಗೆ ಅನುಕೂಲವೂ ಆಗಲಿದೆ.ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಪರಿಸರಕ್ಕೆ ಸ್ನೇಹಿ ವಸತಿ ಸಮುಚ್ಛಯಕ್ಕೆ ಒತ್ತು ನೀಡಿ. ವೇಗವಾಗಿ ಉದ್ಯಮ ಶೀಲ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಮಂಗಳೂರು ನಗರದ ಈ ವಸತಿ ಸಮುಚ್ಛಯದಲ್ಲಿರುವ ಎಲ್ಲರಿಗೂ ಆರೋಗ್ಯನೆಮ್ಮದಿ ಭಗವಂತನು ಕರುಣಿಸಲಿ ಎಂದು ರಮಾನಾಥ ರೈ ಶುಭ ಹಾರೈಸಿದರು. ರಾಜ್ಯ ಆಹಾರ ಸಚಿವ ಯು.ಟಿ.ಖಾದರ್ ಮಾತನಾಡುತ್ತಾ ಸರಕಾರ ವಸತಿ ಇಲ್ಲದ ಎಲ್ಲರಿಗೆ ವಸತಿ ಸೌಕರ್ಯವನ್ನು ನೀಡುವ ಗುರಿ ಹೊಂದಿದೆ.ಆದರೆ ಈ ಗುರಿಯನ್ನು ತಲುಪಲು ಒಮ್ಮೆಲೆ ಸಾಧ್ಯವಿಲ್ಲ ಇಂತಹ ಸಂದರ್ಭದಲ್ಲಿ ಖಾಸಗಿ ಸಂಸ್ಥೆಗಳು ಜನರ ಬೇಡಿಕೆಗೆ ಪೂರಕವಾಗಿ ವಸತಿ ಸಮುಚ್ಛಯವನ್ನು ನಿರ್ಮಿಸಿಕೊಡುವ ಮೂಲಕ ಎಲ್ಲರಿಗೂ ವಸತಿಯ ಕನಸು ತ್ವರಿತವಾಗಿ ನನಸಾಗಲು ಸಾಧ್ಯವಾಗುತ್ತಿದೆ.ನಿಧಿ ಡೆವಲಪರ್ಸ್ ಸಂಸ್ಥೆ ನಿರ್ಮಾಣ ಕ್ಷೇತ್ರದಲ್ಲಿ ಉತ್ತಮ ಮಾದರಿಯ ವಸತಿ ಸಂಕೀರ್ಣವನ್ನು ನಿರ್ಮಿಸಿ ವಾಣಿಜ್ಯ ಉದ್ದೇಶಕ್ಕಿತಂಲೂ ಹೆಚ್ಚಾಗಿ ಗುಣಮಟ್ಟಕ್ಕೆ ಒತ್ತು ನೀಡಿರುವುದು ಶ್ಲಾಘನೀಯ ಎಂದರು.
ಶಾಸಕರಾದ ಜೆ.ಆರ್.ಲೋಬೋ ಶುಭ ಹಾರೈಸಿದರು. ಕ್ಯಾ.ಗಣೇಶ್ ಕಾರ್ನಿಕ್ ಅತ್ಯಾಧುನಿಕ ಜಿಮ್ ವಿಭಾಗವನ್ನು ಉದ್ಘಾಟಿಸಿದರು. ಮೇಯರ್ ಹರಿನಾಥ್ ಮಿನಿ ಆ್ಯಂಪಿ ಥಿಯೇಟರನ್ನು ಉದ್ಘಾಟಿಸಿದರು.ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯ ಪದ್ಮನಾಭ ಕೋಟ್ಯಾನ್, ಮನಪಾ ಸದಸ್ಯೆ ಜಯಂತಿ ಆಚಾರ್,ಕ್ರೆಡೈ ಅಧ್ಯಕ್ಷ ಡಿ.ಬಿ.ಮೆಹ್ತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಮಂಗಳೂರು ವಿಭಾಗದ ಮುಖ್ಯಸ್ಥರಾದ ಬಿ.ಕೆ.ವಿಶ್ವೇಶ್ವರಿ ಆರ್ಶೀವಚನ ನೀಡಿದರು.ಸಮಾರಂಭದಲ್ಲಿ ನಿಧಿ ಲ್ಯಾಂಡ್ ಇನ್‌ಫ್ರಾಸ್ಟಕ್ಚರ್ ಡೆವಲಪರ್ಸ್ ಸಂಸ್ಥೆಯ ನಿರ್ದೇಶಕರಾದ ಪ್ರಶಾಂತ್ ಕುಮಾರ್ ಸನಿಲ್,ಶರಶ್ಚಂದ್ರ ಸನಿಲ್ , ರೇವತಿ ಸನಿಲ್,ನೈನಾ ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.
ವೃಂದಾವನ ವಸತಿ ಸಮುಚ್ಛಯ:-ಮಣ್ಣ ಗುಡ್ಡೆಯ ಸುಮಾರು 1.7 ಎಕ್ರೆ ವಿಸ್ತೀರ್ಣದಲ್ಲಿ ವಿಶ್ವ ದರ್ಜೆಯ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಉತ್ಕೃಷ್ಟ ಗುಣ ಮಟ್ಟದ 2ಬಿಎಚ್‌ಕೆ,3ಬಿಎಚ್‌ಕೆ ಯ 109 ಯೂನಿಟ್‌ಗಳನ್ನು ಹೊಂದಿರುವ ವಸತಿ ಸಮುಚ್ಛಯ ಹವಾನಿಯಂತ್ರಿತ ಒಳಾಂಗಣ,4 ಶುದ್ಧ ನೀರಿನ ಘಟಕಗಳು,ಕೊಳವೆ ಬಾವಿ,ನಳ್ಳಿನೀರಿನ ಸಂಪರ್ಕ,ತ್ಯಾಜ್ಯ ನೀರು ಸಂಸ್ಕರಣಾ ಘಟಕ,ಹವಾನಿಯಂತ್ರಿತ ಒಳಾಂಗಣ, ಬಿಲಿಯರ್ಡ್ಸ,ಕೇರಂ ಲೂಡೋ,ಚದುರಂಗ ಸೇರಿದಂತೆ ವಿವಿಧ ಕ್ರೀಡಾ ವ್ಯವಸ್ಥೆ,ಯೋಗ ಧ್ಯಾನದ ಕೊಠಡಿಗಳು, ಜಿಮ್, ಈಜುಕೊಳ, ಆ್ಯಂಪಿ ಥಿಯೇಟರ್ ಜಾಗಿಂಗ್ ಪಾರ್ಕ್, ಹಿರಿಯ ನಾಗರಿಕರಿಗೆ ಮಿನಿ ಉದ್ಯಾನವನ. ಸುತ್ತಲು ಹಸುರಿನ ಹಾಸು ಮತ್ತು ಗಿಡಗಳ ಆವರಣ,ನೀರಿನ ಝರಿ,ಲಕ್ಸುರಿ ಮನೆಗಳ ವಿನ್ಯಾಸ,ಮಕ್ಕಳ ಆಟದ ಅಂಗಳ,ಗರಿಷ್ಠ ಸುರಕ್ಷತೆ,ಪ್ರತಿಯೊಂದು ಪ್ಲಾಟ್‌ಗಳಿಗೂ ಸೆನ್ಸಾರ್ ಸಿಸ್ಟಮ್‌ನ ಪ್ರವೇಶ ದ್ವಾರ,77 ಸಿ.ಸಿ ಕೆಮಾರಾಗಳನ್ನು ಸಮುಚ್ಛಯ ಹೊಂದಿದೆ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.







