ಕಣ್ಮನ ಸೆಳೆದ ಚಿತ್ರಸಂತೆ..!
ಚಿತ್ರಕಲಾ ಪರಿಷತ್ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾದ 2017ನೆ ಸಾಲಿನ ಚಿತ್ರಸಂತೆಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ದೇಶದ 16 ರಾಜ್ಯಗಳಿಂದ ಆಗಮಿಸಿದ್ದ ಸುಮಾರು 1,400 ಕಲಾವಿದರು ರಚಿಸಿದ್ದ ಸುಮಾರು 80 ಸಾವಿರ ಕಲಾಕೃತಿಗಳು ಕುಮಾರ ಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ ಆವರಣ ಹಾಗೂ ರಸ್ತೆಗಳಲ್ಲಿ ಪ್ರದರ್ಶನಗೊಂಡವು. ಕೇವಲ ಪ್ರದರ್ಶನ ಮಾತ್ರವಲ್ಲದೇ ಮಾರಾಟಕ್ಕೂ ಅನುವು ಮಾಡಿಕೊಟ್ಟಿದ್ದರಿಂದ ಕಲಾ ಪ್ರೇಮಿಗಳು ತಮಗಿಷ್ಟವಾದ ಕಲಾಕೃತಿಗಳನ್ನು ಖರೀದಿಸಿ ಮನೆಗೆ ಕೊಂಡೊಯ್ದರು.
Next Story





