ಪಾಕಿಸ್ತಾನಕ್ಕೆ ಹೋಗಬೇಕಾಗಿದೆ. ಟಿಕೇಟು ಕೊಡ್ತೀರಾ: ಕವಿ ಕುರಿಪ್ಪುಯ ಶ್ರೀಕುಮಾರ್ ಸವಾಲು

ಕೇರಳ, ಒಯೂರ್,ಜ.16: ಪಾಕಿಸ್ತಾನಕ್ಕೆ ಹೋಗುವ ಬಯಕೆ ಇದೆ ಎಂದು ಕೇರಳದ ಪ್ರಸಿದ್ಧ ಕವಿ ಕುರಿಪ್ಪುಯ ಶ್ರೀಕುಮಾರ್ ಹೇಳಿದ್ದಾರೆ. ಆದರೆ ಸಂಘಪರಿವಾರ ಸಂಘಟನೆಗಳು ತನಗೆ ಟಿಕೇಟು ತೆಗೆದು ಕೊಡಬೇಕು ಎಂದಿದ್ದಾರೆ. ಖೈಬರ್ ಚುರಂ ನೋಡಲು, ಲಾಲಾಲಜ್‌ಪತ್‌ರಾಯ್ ಬಿದ್ದು ಅಸುನೀಗಿದ ಸ್ಥಳವನ್ನು ನೋಡಲು, ಧೀರ ದೇಶಪ್ರೇಮಿ ಭಗತ್‌ಸಿಂಗ್‌ರ ಘೋರಿಯನ್ನು ಸಂದರ್ಶಿಸುವ ಬಯಕೆ ತನಗಿದೆ ಎಂದು ಕವಿ ಹೇಳಿದ್ದಾರೆ.
ಎಂಟಿ ವಾಸುದೇವನ್ ನಾಯರ್, ಕಮಲ್‌ರೊಡನೆ ಸಂಘಪರಿವಾರ-ಆರೆಸ್ಸೆಸ್ ಅಸಹಿಷ್ಣುತೆಯನ್ನು ಖಂಡಿಸಿ ಪ್ರಗತಿ ಪರ ಕಲಾಸಾಹಿತ್ಯ ಸಂಘ ಸಂಘಟಿಸಿದ ಪ್ರತಿಭಟನಾ ಕೂಟವನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು ಎಂದು ವರದಿಯಾಗಿದೆ.
Next Story





