ಇನ್ನು ಎಟಿಎಂನಿಂದ ದಿನಕ್ಕೆ 10 ಸಾವಿರ ರೂ. ವಿಥ್ ಡ್ರಾ ಮಾಡಬಹುದು

ಹೊಸದಿಲ್ಲಿ,ಜ.16: ಎಟಿಎಂನಿಂದ ಹಣ ವಿಥ್ ಡ್ರಾ ಮಾಡುವ ಮಿತಿಯನ್ನು ಆರ್ ಬಿಐ ಏರಿಸಿದ್ದು, ಇನ್ನು ದಿನಕ್ಕೆ ಎಟಿಎಂನಿಂದ 10 ಸಾವಿರ ರೂ. ವಿಥ್ ಡ್ರಾ ಮಾಡಬಹುದು. ಆರಂಭದಲ್ಲಿ 2 ಸಾವಿರ ರೂ. ವಿಥ್ ಡ್ರಾ ಮಾಡಲು ಅವಕಾಶ ಇತ್ತು. ಬಳಿಕ ಜನವರಿ 1ರಿಂದ 4,500 ರೂ. ವಿಥ್ ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ವಿಥ್ ಡ್ರಾ ಮಿತಿಯನ್ನು 10 ಸಾವಿರ ರೂ.ಗಳಿಗೆ ಏರಿಕೆ ಮಾಡಲಾಗಿದೆ
ದಿನನಿತ್ಯ ಎಟಿಎಂನಿಂದ ವಿಥ್ ಡ್ರಾ ಮಿತಿಯನ್ನು ಏರಿಸಲಾಗಿದ್ದರೂ ಉಳಿತಾಯ ಖಾತೆಯಿಂದ ವಾರಕ್ಕೆ 24 ಸಾವಿರ ರೂ. ಮಾತ್ರ ವಿಥ್ ಡ್ರಾ ಮಾಡಬಹುದಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನ ಈ ಆದೇಶ ಸೋಮವಾರ ಮಧ್ಯರಾತ್ರಿಯಿಂದ ಜಾರಿಯಾಗಲಿದೆ
ಚಾಲ್ತಿ ಖಾತೆಯಿಂದ ವಿಥ್ ಡ್ರಾ ಮಿತಿಯನ್ನು ವಾರಕ್ಕೆ 50 ಸಾವಿರ ರೂ.ಗಳಿಂದ 1 ಲಕ್ಷ ರೂ. ತನಕ ಏರಿಕೆ ಮಾಡಲಾಗಿದೆ.
Next Story





