ಪದಾಧಿಕಾರಿಗಳ ಆಯ್ಕೆ
ಬ್ರಹ್ಮಾವರ, ಜ.16: ಭದ್ರಗಿರಿ ಬದ್ರಿಯಾ ಜುಮ್ಮಾ ಮಸೀದಿಯ ಅಧಿನ ದಲ್ಲಿರುವ ಅಲ್-ಅಮೀನ್ ಯಂಗ್‌ಮೆನ್ಸ್ ಅಸೋಸಿಯೇಶನ್ನ 2017-18ನೆ ಸಾಲಿನ ನೂತನ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಉಪಾಧ್ಯಕ್ಷ ಮಹಮ್ಮದ್ ಫೈಸಲ್ ವಹಿಸಿದ್ದರು. ಕಾರ್ಯದರ್ಶಿ ರಾಹಿಲ್ ಸ್ವಾಗತಿಸಿ ವಾರ್ಷಿಕ ವರದಿ ಮಂಡಿಸಿದರು. ಎಸ್ಸೆಸ್ಸೆಫ್ ಕಾರ್ಯದರ್ಶಿ ನಾಸೀರ್ ಲೆಕ್ಕ ಪತ್ರ ಮಂಡಿಸಿದರು. ಖತೀಬ್ ಅಬ್ದುರ್ರಹ್ಮಾನ್ ಸಅದಿ ನೂತನ ಸಮಿತಿಗೆ ಚಾಲನೆ ನೀಡಿದರು.
ಗೌರವಾಧ್ಯಕ್ಷರಾಗಿ ಜಾಕಿರ್ ಹುಸೇನ್, ಅಧ್ಯಕ್ಷರಾಗಿ ಮಹಮ್ಮದ್ ಇಲ್ಯಾಸ್, ಉಪಾಧ್ಯಕ್ಷರಾಗಿ ನವಾಝ್, ಕಾರ್ಯದರ್ಶಿ/ಕೋಶಾಧಿಕಾರಿ ಯಾಗಿ ಯೂಸುಫ್ ಶಾಹಿಲ್, ಜೊತೆ ಕಾರ್ಯದರ್ಶಿಯಾಗಿ ಮಹಮ್ಮದ್ ರಾಹಿಲ್, ಸ್ವಲಾತ್ ಕಾರ್ಯದರ್ಶಿಯಾಗಿ ಶಾಹಿಲ್ ಕೆ.ಟಿ., ಸದಸ್ಯರುಗಳಾಗಿ ನಾಸೀರ್, ನಯಾಝ್, ಫೈಸಲ್, ನಿಶಾನ್, ರಫೀಕ್, ಅನೀಶ್, ಸಿನಾನ್, ರಮೀಝ್, ಶಾಹುಲ್ ಹಮೀದ್, ಸಾದಿಕ್, ಶರೀಫ್, ಶಮ್ಮಿಲ್, ನಿಹಾಲ್, ಅಶ್ರಫ್, ನಿಶಾರ್, ಮಸೂದ್, ಶಾಹುಲ್ ಕೊಲಂಬೆ ಅವರನ್ನು ಆಯ್ಕೆ ಮಾಡಲಾಯಿತು.
Next Story





