ಈಶ್ವರಮಂಗಳಕ್ಕೆ ಬಾಯಾರ್ ತಂಙಳ್
ಪುತ್ತೂರು,ಜ.16:ಈಶ್ವರಮಂಗಳ ಎಸ್ಸೆಸ್ಸೆಫ್ ಮತ್ತು ಎಸ್.ವೈ ಎಸ್ ಇದರ ಜಂಟಿ ಆಶ್ರಯದಲ್ಲಿ ಇದೇ ಜನವರಿ 19 ರಂದು ರಾತ್ರಿ ತ್ವೈಬಾ ಸೆಂಟರಿನಲ್ಲಿ ಸಯ್ಯಿದ್ ಬಾಯಾರ್ ತಂಙಳ್ ನೇತೃತ್ವದಲ್ಲಿ ಬೃಹತ್ ತಾಜುಲ್ ಉಲಮಾ ಮತ್ತು ನೂರುಲ್ ಉಲಮಾ ಅನುಸ್ಮರಣೆ ಹಾಗೂ ಸ್ವಲಾತ್ ಮಜ್ಲಿಸ್ ನಡೆಯಲಿದೆ. ಸಂಜೆ 4 ಕ್ಕೆ ತಿರುವಟ್ಟೂರು ಅಸ್‌ಅದ್ ಸಖಾಫಿ ಯವರ ನೇತೃತ್ವದಲ್ಲಿ ತಾಜುಲ್ ಉಲಮಾ ಮೌಲಿದ್ ನಡೆಯಲಿದ್ದು 5.30 ಕ್ಕೆ ಹಾಫಿರ್ ಸಜ್ಜಾದ್ ಮತ್ತು ಸಂಗಡಿಗರಿಂದ ಮುಹ್ಯದ್ದೀನ್ ಮಾಲೆ ಆಲಾಪನೆ ಮತ್ತು ವ್ಯಾಖ್ಯಾನ ನಡೆಯಲಿದೆ. ರಾತ್ರಿ ಅಶ್ರಫ್ ಜೌಹರಿ ಎಮ್ಮೆಮಾಡು ಮುಖ್ಯ ಭಾಷಣ ಮಾಡಲಿರುವರು ಎಂದು ಅಬ್ದುಲ್ ಖಾದರ್ ಝುಹ್ರಿ ತಿಳಿಸಿದ್ದಾರೆ.
Next Story





