ಪೊಲೀಸರ ಮನೆಗೆ ನುಗ್ಗಿ 5.10ಲಕ್ಷ ರೂ.ಮೌಲ್ಯದ ಸೊತ್ತು ಕಳವು

ಸಾಂದರ್ಭಿಕ ಚಿತ್ರ
ಮಣಿಪಾಲ, ಜ.16: ಮಣಿಪಾಲ ಪೊಲೀಸ್ ವಸತಿ ಗೃಹದಲ್ಲಿರುವ ಎರಡು ಮನೆಗಳಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಜ.14ರಂದು ಬೆಳಿಗ್ಗೆ 9:30ರಿಂದ ಜ.15ರ ಬೆಳಗ್ಗೆ 9ಗಂಟೆ ಮಧ್ಯಾವಧಿ ಯಲ್ಲಿ ವಸತಿಗೃಹದ ಬ್ಲಾಕ್ ನಂಬ್ರ 6ರಲ್ಲಿರುವ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಮುಖ್ಯ ಆರಕ್ಷಕರ 66ನೆ ನಂಬರಿನ ಮನೆಯ ಬಾಗಿಲಿನ ಬೀಗದ ಕೊಂಡಿಯನ್ನು ತುಂಡರಿಸಿ ಒಳನುಗ್ಗಿದ ಕಳ್ಳರು ಒಟ್ಟು 176 ಗ್ರಾಂ ಚಿನ್ನಾಭರಣ ಕಳವು ಮಾಡಿ, ಬಳಿಕ 67ನೆ ನಂಬರಿನ ಮನೆಗೆ ನುಗ್ಗಿ 5000 ರೂ. ನಗದು ಹಾಗೂ ಬೆಳ್ಳಿಯ ಉಡಿದಾರವನ್ನು ಕಳವು ಮಾಡಿದ್ದಾರೆ.
ಕಳವಾದ ಚಿನ್ನಾಭರಣ ಹಾಗೂ ಇದರ ಸೊತ್ತಿನ ಒಟ್ಟು ಮೌಲ್ಯ 5.10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story





