ಅಲಂಗಾರಿನಲ್ಲಿ ಡಾ.ಅಲೋಶಿಯಸ್ ಪೌಲ್ ಡಿ’ಸೋಜ ಪೌರಸನ್ಮಾನ

ಮೂಡುಬಿದಿರೆ,ಜ.16: ಅಲಂಗಾರಿನಲ್ಲಿ ನಡೆದ ಬಾಲ ಯೇಸು ಹಬ್ಬದ ಸಂದರ್ಭ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಅಲೋಶಿಯಸ್ ಪೌಲ್ ಡಿಸೋಜ ಅವರನ್ನು ಪೌರ ಸನ್ಮಾನದಿಂದ ಗೌರವಿಸಲಾಯಿತು.
ಹುಟ್ಟಿನ್ ಅಮೃತೋತ್ಸವ, ಯಜಕೀದೀಕ್ಷೆಯ ಸುವರ್ಣೊತ್ಸವ ಹಾಗು ಧರ್ಮಧ್ಯಕ್ಷ ದೀಕ್ಷೆಯ ವಿಂಶತಿ ಉತ್ಸವದ ಸಲುವಾಗಿ ಸನ್ಮಾನವನ್ನು ಮಾಡಲಾಯಿತು. ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಮೂಡಬಿದಿರೆ ಪುರಸಭೆಯ ಆದ್ಯಕ್ಷೆ ಹರಿಣಾಕ್ಷಿ ಸುವರ್ಣ, ಉಪಾಧ್ಯಕ್ಷ ವಿನೋದ್ ಸೆರಾವೊ, ಮಾಜಿ ಸಚಿವ ಅಮರನಾಥ್ ಶೆಟ್ಟಿ, ಬಡಗು ಮಹಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಈಶ್ವರ್ ಭಟ್, ಮೂಡುಬಿದಿರೆ ವಲಯದ ಪ್ರಧಾನ ಗುರು ಪೌಲ್ ಸಿಕ್ವೇರ, ಅಲಂಗಾರು ಚರ್ಚ್‌ನ ಧರ್ಮಗುರು ಬಾಸಿಲ್ ವಾಸ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥನ್ ರೈ, ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಶೆಟ್ಟಿ, ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಪಿ.ಕೆ. ಥೋಮಸ್, ಪುರಸಭಾ ಸದಸ್ಯರಾದ ಬಾಹುಬಲಿ ಪ್ರಸಾದ್, ರತ್ನಾಕರ ದೇವಾವಾಡಿಗ, ಕೊರಗಪ್ಪ ಉಪಸ್ಥಿತರಿದ್ದರು.





