ಮೊದಲ ಟೆಸ್ಟ್:ನ್ಯೂಝಿಲೆಂಡ್‌ಗೆ ಭರ್ಜರಿ ಜಯ

ವೆಲ್ಲಿಂಗ್ಟನ್, ಜ.16: ನಾಯಕ ಕೇನ್ ವಿಲಿಯಮ್ಸನ್ ದಾಖಲಿಸಿದ ಹದಿನೈದನೆ ಶತಕದ ನೆರವಿನಿಂದ ನ್ಯೂಝಿಲೆಂಡ್ ತಂಡ ಇಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾ ದೇಶ ತಂಡದ ವಿರುದ್ಧ ಏಳು ವಿಕೆಟ್‌ಗಳ ಜಯ ಗಳಿಸಿದೆ.
ಬೇಸಿನ್ ರಿಸರ್ವ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎರಡನೆ ಇನಿಂಗ್ಸ್‌ನಲ್ಲಿ ಗೆಲುವಿಗೆ 217 ರನ್‌ಗಳ ಸವಾಲು ಪಡೆದಿದ್ದ ನ್ಯೂಝಿಲೆಂಡ್ ತಂಡ 39.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಗಳಿಸುವ ಮೂಲಕ ಗೆಲುವಿನ ದಡ ಸೇರಿತು.
ಈ ಗೆಲುವಿನೊಂದಿಗೆ ಎರಡು ಟೆಸ್ಟ್‌ಗಳ ಸರಣಿಯಲ್ಲಿ ನ್ಯೂಝಿಲೆಂಡ್ 1-0 ಮುನ್ನಡೆ ಸಾಧಿಸಿತು.
ನಾಯಕ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಮೂರನೆ ವಿಕೆಟ್‌ಗೆ ಓವರ್‌ಗೆ 6 ರನ್ ಸರಾಸರಿಯಂತೆ ಬ್ಯಾಟಿಂಗ್ ನಡೆಸಿ 163 ರನ್‌ಗಳನ್ನು ಸೇರಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು.
ನಾಯಕ ವಿಲಿಯಮ್ಸನ್ ಔಟಾಗದೆ 104 ರನ್(144ನಿ, 90ಎ, 15 ಬೌ) ಗಳಿಸಿದರು. ರಾಸ್ ಟೇಲರ್ 60 ರನ್ ಗಳಿಸಿ ಔಟಾದರು. ಹೆನ್ರಿ ನಿಕೊಲಾಸ್ ಔಟಾಗದೆ 4 ರನ್ ಗಳಿಸಿದರು.
ಬಾಂಗ್ಲಾ ದೇಶ ತಂಡ ನಾಲ್ಕು ದಿನಗಳ ತನಕ ಮೇಲುಗೈ ಸಾಧಿಸಿತ್ತು. ಅಂತಿಮ ದಿನ ಹಿಡಿತ ಸಡಿಲಗೊಂಡು ಕಿವೀಸ್‌ಗೆ ಶರಣಾಗಿದೆ.
ನ್ಯೂಝಿಲೆಂಡ್ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 56 ರನ್‌ಗಳ ಮೇಲುಗೈ ಸಾಧಿಸಿದ್ದ ಬಾಂಗ್ಲಾದೇಶ ತಂಡ ನಾಲ್ಕನೆ ದಿನದಾಟದಂತ್ಯಕ್ಕೆ ಎರಡನೆ ಇನಿಂಗ್ಸ್‌ನಲ್ಲಿ 18.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 66 ರನ್ ಗಳಿಸಿತ್ತು. ಮೊಮಿನಲ್ ಹಕ್ ಔಟಾಗದೆ 10 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು.
ಇಂದು ಬ್ಯಾಟಿಂಗ್ ಮುಂದುವರಿಸಿದ ಬಾಂಗ್ಲಾದೇಶ ತಂಡ ರವಿವಾರ ಗಳಿಸಿದ ಮೊತ್ತಕ್ಕೆ 94 ರನ್ ಸೇರಿಸುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡಿತು.
ಟ್ರೆಂಟ್ ಬೌಲ್ಟ್ (53ಕ್ಕೆ 3), ಸ್ಯಾಂಟ್ನೆರ್(36ಕ್ಕೆ 2), ವ್ಯಾಗ್ನೆರ್(37ಕ್ಕೆ 2) ಮತ್ತು ಸೌಥಿ(34ಕ್ಕೆ1) ದಾಳಿಗೆ ಸಿಲುಕಿದ ಬಾಂಗ್ಲಾ ತಂಡ ಬೇಗನೆ ಆಲೌಟಾಗಿ ನ್ಯೂಝಿಲೆಂಡ್‌ಗೆ 217 ರನ್‌ಗಳ ಸವಾಲು ವಿಧಿಸಿತ್ತು.
ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮುಶ್ಫಿಕುರ್ರಹೀಂ ಅವರು ಸೌಥಿ ಬೌನ್ಸರ್ ಚೆಂಡು ಹೆಲ್ಮೆಟ್‌ಗೆ ಬಡಿದು ಆಸ್ಪತ್ರಗೆ ಸೇರಿದ ಹಿನ್ನೆಲೆಯಲ್ಲಿ ಬಾಂಗ್ಲಾ ತಂಡ 57.5 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 160 ರನ್ ಗಳಿಸುವುದರೊಂದಿಗೆ ಇನಿಂಗ್ಸ್ ಮುಗಿಸಿತು. ಇಮ್ರುಲ್ ಖೈಸ್ 36 ರನ್ ಗಳಿಸಿ ಔಟಾಗದೆ ಉಳಿದರು. ಶಬ್ಬೀರ್ ರಹ್ಮಾನ್ (50) ಗಳಿಸಿರುವುದು ತಂಡದ ಪರ ಗರಿಷ್ಠ ಸ್ಕೋರ್.
ನಾಯಕ ಮುಶ್ಫಿಕುರ್ರಹೀಂ 80 ನಿಮಿಷಗಳ ಬ್ಯಾಟಿಂಗ್‌ನಲ್ಲಿ 53 ಎಸೆತಗಳನ್ನು ಎದುರಿಸಿದ್ದರು. ಒಂದು ಬೌಂಡರಿ ಇರುವ 13 ರನ್ ಗಳಿಸಿದ್ದಾಗ ಅವರ ತಲೆಗೆ ಸೌಥಿಯ ಬೌನ್ಸರ್ ಚೆಂಡು ಬಡಿಯಿತು. ಆಗ ತಂಡದ ಸ್ಕೋರ್ 114 ಅಗಿತ್ತು.
ಮೊಮಿನಲ್ ಹಕ್ ಔಟಾಗದೆ 23 ರನ್ ಗಳಿಸಿದರು. ಮಹ್ಮದುಲ್ಲಾ (5), ಮೆಹಾದಿ ಹಸನ್ ಮಿರಾಝ್ (1), ಶಾಕಿಬ್ ಅಲ್ ಹಸನ್ (0), ಟಾಸ್ಕಿನ್ ಅಹ್ಮದ್ (5), ಕಮ್ರುಲ್ ಇಸ್ಲಾಂ ರಬ್ಬಿ (1) ಮತ್ತು ಸುಬಾಶಿಷ್ ರಾಯ್ (0)ವಿಫಲರಾದರು.ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ದಾಖಲಿಸಿದ್ದ ಶಾಕಿಬ್ ಅಲ್ ಹಸನ್(217) ಎರಡನೆ ಇನಿಂಗ್ಸ್‌ನಲ್ಲಿ ಖಾತೆ ತೆರೆಯದೆ ನಿರ್ಗಮಿಸಿರುವುದು, ಮತ್ತು ಇವರ ಜೊತೆ ಶತಕ (159) ದಾಖಲಿಸಿದ್ದ ನಾಯಕ ಮುಶ್ಪೀಕುರ್ರಹೀಂ ಗಾಯಗೊಂಡಿರುವುದು ಬಾಂಗ್ಲಾ ತಂಡದ ಹಿನ್ನಡೆಗೆ ಕಾರಣವಾಗಿತ್ತು.
ಎರಡನೆ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ 11.2 ಓವರ್‌ಗಳಲ್ಲಿ 39 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತ್ತು. ಮೂರನೆ ವಿಕೆಟ್‌ಗೆ ರಾಸ್ ಟೇಲರ್ ಮತ್ತು ವಿಲಿಯಮ್ಸನ್ ಜೊತೆಯಾಗಿ ತಂಡಕ್ಕೆ ಆಸರೆ ನೀಡಿದರು.
ವಿಲಿಯಮ್ಸನ್ ಅವರು ಮೆಹಾದಿ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಸಮಬಲ ಸಾಧಿಸಿದರು. ಶತಕ ಪೂರ್ಣಗೊಳಿಸಿದರು. ಮುಂದಿನ ಎಸೆತದಲ್ಲಿ 1 ರನ್ ತೆಗೆಯುವುದರೊಂದಿಗೆ ನ್ಯೂಝಿಲೆಂಡ್‌ನ್ನು ಗೆಲುವಿನ ದಡ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್ ವಿವರ
ಬಾಂಗ್ಲಾದೇಶ ಮೊದಲ ಇನಿಂಗ್ಸ್ 595, ನ್ಯೂಝಿಲೆಂಡ್ ಮೊದಲ ಇನಿಂಗ್ಸ್ 539, ಬಾಂಗ್ಲಾ ಎರಡನೆ ಇನಿಂಗ್ಸ್ 57.5 ಓವರ್‌ಗಳಲ್ಲಿ 160/9( ಶಬ್ಬೀರ್ ರಹ್ಮಾನ್ 50, ಇಮ್ರುಲ್ ಖೈಸ್ ಔಟಾಗದೆ 36, ತಮೀಮ್ ಇಕ್ಬಾಲ್ 25; ಬೌಲ್ಟ್ 53ಕ್ಕೆ 3).
ನ್ಯೂಝಿಲೆಂಡ್ 39.4 ಓವರ್‌ಗಳಲ್ಲಿ 217/3(ವಿಲಿಯಮ್ಸನ್ ಔಟಾಗದೆ 104, ಟೇಲರ್ 60; ಹಸನ್ ಮಿರಾಝ್ 66ಕ್ಕೆ 2).
,,,,,,,,,,,,







